ತುರುವೇಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವತಿಯಿಂದ, ಫೆಬ್ರವರಿ 1ರಂದು ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯು ತುರುವೇಕೆರೆಯ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ತುರುವೇಕೆರೆ ಕ್ಷೇತ್ರ ಯೋಜನಾಧಿಕಾರಿ ಯಶೋಧರ್ ರವರು ಹೇಳಿದರು.
ತುರುವೇಕೆರೆ ಪಟ್ಟಣದ ತುರುವೇಕೆರೆ ಗ್ರಾಮಾಂತರ ಯೋಜನಾ ಕಚೇರಿಯಲ್ಲಿ, ತಾಲೂಕು ಯೋಜನಾಧಿಕಾರಿ ಅನಿತಾ ಶೆಟ್ಟಿ, ಕ್ಷೇತ್ರ ಯೋಜನಾಧಿಕಾರಿ ಯಶೋಧರ್, ನೇತೃತ್ವದಲ್ಲಿ ಕರೆದ ಜಂಟಿ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ 2011ನೇ ವರ್ಷದಲ್ಲಿ ಪ್ರಾರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಸಂಘಟನೆ, ಸೌಲಭ್ಯ ವಂಚಿತರ ಸಬಲೀಕರಣ ಹಾಗೂ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಗ್ರಾಮೀಣರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾ ಬಂದಿದೆ , ಜೊತೆಗೆ ಈ ಯೋಜನೆಯು ಶಿಸ್ತು ,ನೈತಿಕ ಮೌಲ್ಯಗಳು, ಜನರಲ್ಲಿ ಧಾರ್ಮಿಕ, ಜಾಗೃತಿ ಮೂಡಿಸುವ ವಿವಿಧ ಧ್ಯೇಯೋದ್ದೇಶಗಳನ್ನು ಹೊಂದಿದ್ದು, ಈ ಯೋಜನೆಯ ಕನಸುಗಾರರು ಮತ್ತು ಮಾರ್ಗದರ್ಶಕರು ಆದ ಪೂಜ್ಯಶ್ರೀ ಡಿ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಆಶಯದಂತೆ, ಗ್ರಾಮೀಣ ಪ್ರದೇಶದ ಕೃಷಿಕರಿಗೆ, ಮಹಿಳೆಯರಿಗೆ, ಯುವಕ, ಯುವತಿಯರಿಗೆ, ದುಶ್ಚಟಗಳಿಂದ ಬಳಲುತಿರುವ ಜನರಿಗೆ, ದುಡಿಯಲು ಸಾಮರ್ಥ್ಯವಿಲ್ಲದವರಿಗೂ ಕೂಡ ಈ ಯೋಜನೆಯಿಂದ ಪ್ರತಿಯೊಬ್ಬರಿಗೂ ಸಹಕಾರಿಯಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಈ ಯೋಜನೆಗಳಾದ ಜನಸಂಘಟನೆ, ಪ್ರಗತಿ ಬಂದು ಸಂಘಟನೆ, ಸ್ವಸಹಾಯ ಸಂಘ, ಮಹಿಳಾ ಜ್ಞಾನವಿಕಾಸ, ಪ್ರಗತಿ ನಿಧಿ, ಸಂಪೂರ್ಣ ಸುರಕ್ಷಾ, ಆರೋಗ್ಯ ರಕ್ಷಾ, ಪ್ರಗತಿ ರಕ್ಷಾ ಕವಚ, ಮಾಶಾಸನ, ಸುಜ್ಞಾನ ನಿಧಿ ಶಿಷ್ಯ ವೇತನ, ಜನಮಂಗಲ, ಸಾಮಾನ್ಯ ಸೇವಾ ಕೇಂದ್ರ, ಹೀಗೆ ಹಲವಾರು ಯೋಜನೆಗಳಿಂದ 67,17,32,725 ಕೋಟಿ ರೂ, ಈ ಭಾಗದಲ್ಲಿರುವ ಸಂಘದ ಸದಸ್ಯರ ವಿವಿಧ ಬೇಡಿಕೆಗಳಿಗೆ ಅನುಗುಣವಾಗಿ ಇಸವಿ1995-96 ರಲ್ಲಿ ತಾಲೂಕಿನಲ್ಲಿ ಪ್ರಗತಿ ನಿಧಿ ಕಾರ್ಯಕ್ರಮ ಪ್ರಾರಂಭವಾಗಿದ್ದು,ಇಂದಿನವರೆಗೂ ಈ ಯೋಜನೆಯಡಿ ವಿವಿಧ ಮಾದರಿಯ ಸಂಘದ ಸದಸ್ಯರುಗಳಿಗೆ ಪ್ರಗತಿ ನಿಧಿ ನೀಡಲಾಗಿದೆ ಎಂದರು.
ಪ್ರಗತಿ ನಿಧಿ ಯೋಜನೆಯಡಿ 26 ಸಾವಿರಕ್ಕೂ ಹೆಚ್ಚು ಸದಸ್ಯರು ಇದರ ಫಲಾನುಭವಿಗಳಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಅನೇಕ ಸೇವೆಗಳನ್ನು ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ನೀಡಲಾಗುವುದು ಎಂದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ