ಮಂಡ್ಯ: ಐಸ್ ಕ್ರೀಂ ತಿಂದ ಬಳಿಕ ಅವಳಿ ಕಂದಮ್ಮಗಳು ಸಾವನ್ನಪ್ಪಿದ ದಾರುಣ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಒಂದೂವರೆ ವರ್ಷದ ತ್ರಿಶುಲ್ ಹಾಗೂ ತ್ರಿಶಾ ಸಾವನ್ನಪ್ಪಿದ ಮಕ್ಕಳಾಗಿದ್ದಾರೆ.
ಮಧ್ಯಾಹ್ನ ಹೊತ್ತಿನಲ್ಲಿ ತಳ್ಳುವ ಗಾಡಿಯಲ್ಲಿ ಐಸ್ ಕ್ರೀಂ ತೆಗೆದುಕೊಂಡು ತಾಯಿ ಪೂಜಾ ಸೇರಿದಂತೆ ಇಬ್ಬರು ಮಕ್ಕಳು ಕೂಡ ಸೇವಿಸಿದ್ದಾರೆ. ಆ ನಂತರ ಮಕ್ಕಳು ಅಸ್ವಸ್ಥವಾಗಿದ್ದರು ಎಂದು ಆರೋಪಿಸಲಾಗಿದೆ.
ಇನ್ನು ಗ್ರಾಮದಲ್ಲಿ ಬೇರೆ ಮಕ್ಕಳು ಕೂಡ ಅದೇ ಐಸ್ ಕ್ರೀಂ ತಿಂದಿದ್ದರು. ಆದರೆ, ಬೇರೆ ಯಾರಿಗೂ ತೊಂದರೆ ಆಗಿಲ್ಲ. ಕಂದಮ್ಮಗಳ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿದು ಬರಬೇಕಿದೆ. ಸದ್ಯ ಮಿಮ್ಸ್ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


