ಕಳಸ: ಮೂಡಿಗೆರೆ ತಾಲ್ಲೂಕಿನ ವಿವಿಧ ಭಾಗದಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಸಾವಪ್ಪಿರುವ ಘಟನೆ ನಡೆದಿದೆ.
ಕಳಸ ಪಟ್ಟಣ ಸಮೀಪದ ಅಂಬಾತೀರ್ಥದ ಭದ್ರಾ ನದಿಯಲ್ಲಿ ಮಧ್ಯಪ್ರದೇಶದ ಕೂಲಿ ಕಾರ್ಮಿಕರೊಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಸುಂದರಿ ಎಸ್ಟೇಟಿನಲ್ಲಿ ಕೆಲಸ ಮಾಡುತ್ತಿದ್ದ ಸಾಗರ ತಮ್ಮ ಸ್ನೇಹಿತನ ಜೊತೆ ನದಿಯಲ್ಲಿ ಸ್ನಾನ ಮಾಡಲು ಇಳಿದಾಗ ಅವಘಡ ಸಂಭವಿಸಿದೆ.
ಆಳವಾದ ಪ್ರದೇಶದಲ್ಲಿ ಮುಳುಗಿದ್ದ ಅವರ ಮೃತದೇಹ ಇನ್ನೂ ಪತ್ತೆ ಆಗಿರಲಿಲ್ಲ. ನಂತರ ಮುಳುಗು ತಜ್ಞ ಈಶ್ವರ್ ಮಲ್ಪೆ ಮೃತದೇಹವನ್ನು ಪತ್ತೆ ಮಾಡಿದರು. ಶೌರ್ಯ ವಿಪತ್ತು ತಂಡದ ಸದಸ್ಯರು ಮೃತದೇಹವನ್ನು ನೀರಿನಿಂದ ಮೇಲೆತ್ತಲು ಸಹಕಾರ ನೀಡಿದರು.
ಈಜಲು ಹೋಗಿ ಮೃತ: ಆಲ್ದೂರು ಸಮೀಪದ ವಗರ್ ರಸ್ತೆ ದೋಣಗುಡಿಗೆ ಗ್ರಾಮದ ಬಾಬು ಅಕ್ಕಮ್ಮ ದಂಪತಿ ಪುತ್ರ ಪೂರ್ಣೇಶ್ ಮನೆಯ ಸಮೀಪದ ಕೃಷಿಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾನೆ.
ಮೂಡಿಗೆರೆ ತಾಲ್ಲೂಕು ಹೆಸಗಲ್ ವಲಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಈಜು ತಜ್ಞರಾದ ಹಾಂದಿ ರಾಕೇಶ್, ಪ್ರಶಾಂತ್, ಅಭಿಲಾಶ್ ಯುವಕನ ಮೃತದೇಹವನ್ನು ಕೃಷಿ ಹೊಂಡದಿಂದ ಹೊರತೆಗೆಯಲು ಸಹಕರಿಸಿದರು. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರ್ಣೇಶ್ ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ ಮೂಡಿಗೆರೆ ಯಲ್ಲಿ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದ. ಈ ಬಾರಿ ನರ್ಸಿಂಗ್ ಕೋರ್ಸ್‌ಗೆ ಸೇರಲು ಸಿದ್ಧತೆ ನಡೆಸಿದ್ದ ಎಂದು ತಂದೆ ಬಾಬು ಹೇಳಿದರು.
ಪಿಎಸ್‌ಐ ಅಕ್ಷಿತಾ ಕೆ.ಪಿ, ಎಎಸ್‌ಐ ಪರಮೇಶ್ ಗೌಡ, ಸಿಬ್ಬಂದಿ ಚಂದ್ರಪ್ಪ, ವಸಂತ, ಆನಂದ್, ಚಾಲಕ ಮಹೇಶ್, ದೊಡ್ಡ ಮಾಗರವಳ್ಳಿ ಪಂಚಾಯತಿ ಸದಸ್ಯ ಕೆ.ಎಲ್ ರಾಜು, ಆಲ್ದೂರು ಶೌರ್ಯ ಘಟಕದ ಅಧ್ಯಕ್ಷ ಕೆ.ಎಲ್, ಕುಮಾರ್, ಮೇಲ್ವಿಚಾರಕಿ ಲಲಿತಾ, ಸುಂದರೇಶ್ ನಂದಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


