ಬೆಂಗಳೂರು: ನೀರಿನ ಸಂಪ್ ಸ್ವಚ್ಛತೆಗಿಳಿದ ಇಬ್ಬರು ಕಾರ್ಮಿಕರ ಸಾವನ್ನಪ್ಪಿದ್ದಾರೆ. ಈ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ತಿರುಪಾಳ್ಯ ಗ್ರಾಮದ ಶ್ರೀನಿವಾಸ ರೆಡ್ಡಿಗೆ ಸೇರಿದ ಸನ್ ಶೈನ್ ಹೋಲ್ಡಿಂಗ್ ಕಂಪನಿಯಲ್ಲಿ ನಡೆದಿದೆ.
ಬಿಹಾರ ಮೂಲದ ಸಹೋದರರಾದ ಚಂದನ್ ರಾಜ್ ಬನ್ ಸಿಂಗ್(31), ಪಿಂಟು ರಾಜ್ ಬನ್(22) ಮೃತ ದುರ್ದೈವಿಗಳು.
ಆ್ಯಸಿಡ್ ಹಾಕಿ ವಾಟರ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ನೀರಿನ ಸಂಪ್ ನಲ್ಲೇ ಮೃತಪಟ್ಟಿದ್ದಾರೆ. ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದ ಜಗದೀಶ್, ಶ್ರೀನಿವಾಸರೆಡ್ಡಿ ಅಸ್ವಸ್ಥರಾಗಿದ್ದಾರೆ.


