ತುಮಕೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉಕ್ಕಿ ಹರಿಯುವ ನೀರಿನಲ್ಲಿ ಯುವಕರ ಮೋಜು ಮಸ್ತಿ ಮಾಡುತ್ತಿದ್ದ ವೇಳೆ ದುರಂತವೊಂದು ಸಂಭವಿಸಿದ್ದು, ನೋಡ ನೋಡುತ್ತಲೇ ತಂದೆ ಮಗ ನೀರಲ್ಲಿ ಕೊಚ್ಚಿ ಹೋದ ವಿಡಿಯೋ ವೈರಲ್ ಆಗಿದೆ.
ನೀರಿನಲ್ಲಿ ಆಟವಾಡಲು ಹೋದ ಯುವಕ ಮತ್ತು ಬಾಲಕ ಇಬ್ಬರು ರಭಸದಿಂದ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ತುಮಕೂರು ಗ್ರಾಮಾಂತರದ ಗೂಳೂರು ಕೆರೆಯಲ್ಲಿ ನಡೆದಿದೆ.
ಸ್ಥಳದಲ್ಲೇ ಇದ್ದ ಸ್ಥಳೀಯರು ಮತ್ತು ಸಾರ್ವಜನಿಕರು ಸೇರಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆಯ ತುಮಕೂರು ಗ್ರಾಮಾಂತರ ತಾಲೂಕಿನ ಗೂಳೂರು ಕೆರೆಯಲ್ಲಿ ನಡೆದಿದೆ.
ಇನ್ನಾದರೂ ಸ್ಥಳೀಯ ಜಿಲ್ಲಾಡಳಿತ ಎಚ್ಚೆತ್ತು ಕೊಂಡು ತುಂಬಿ ಹರಿಯುತ್ತಿರುವ ಕೆರೆಗಳಿಗೆ ಭದ್ರತೆ ನಿಯೋಜನೆ ಮಾಡುತ್ತದೆಯಾ ನೋಡಬೇಕಿದೆ. ಜೊತೆಗೆ ಸಾರ್ವಜನಿಕರು ಕೂಡ ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ. ಹರಿಯುವ ನೀರಿನಲ್ಲಿ ಆಟವಾಡುವುದು, ಹುಚ್ಚಾಟ ಆಡುವುದು ಪ್ರಾಣಕ್ಕೆ ಅಪಾಯ ತಂದೊಡ್ಡಬಹುದು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz