ತಿಪಟೂರು: ಸಾಲ ಬಾಧೆ ತಾಳಲಾರದೇ ಯುವಕನೊಬ್ಬ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಹೆಚ್.ಎಂ.ಪಾಳ್ಯದಲ್ಲಿ ನಡೆದಿದೆ.
ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಹೆಚ್.ಎಂ ಪಾಳ್ಯ ನಿವಾಸಿ ಅಡವೀಶ್(39) ಮೃತ ದುರ್ದೈವಿ. ಅಡವೀಶ್ ಫೈನಾನ್ಸ್ ,ಬ್ಯಾಂಕ್, ಸೇರಿದಂತೆ ಹಲವು ಕಡೆ ಕೈ ಸಾಲಮಾಡಿಕೊಂಡಿದ್ದು, ಸಾಲಕೊಟ್ಟವರ ಕಿರುಕುಳ ತಾಳಲಾರದೇ ಸಾವಿಗೆ ಶರಣಾಗಿರುವುದಾಗಿ ಹೇಳಲಾಗಿದೆ.
ಮೃತ ಅಡವೀಶ್ ಗೆ ಮದುವೆಯಾಗಿದ್ದು, 3 ವರ್ಷದ ಮಗು ಸಹ ಇದೆ. ಘಟನೆ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx