ಬೆಂಗಳೂರು: ಸಾಲ ಬಾಧೆ ತಾಳಲಾರದೆ ನೀರಿನ ಟ್ಯಾಂಕರ್ ಮುಂದೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ನವಲ್ ಪಂಡಿತ್ (25) ಎಂದು ಗುರುತಿಸಲಾಗಿದೆ.
ಈತ ಹಾಲು ಒಕ್ಕೂಟದ ಉತ್ಪಾದನಾ ವಿಭಾಗದಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಎಸ್ ಜಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


