35 ವರ್ಷದ ಅಂಗಡಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನ ‘ಅಂಕಲ್ʼ ಎಂದು ಕರೆದದ್ದಕ್ಕೆ ಕಾರಣಕ್ಕೆ 18 ವರ್ಷದ ಯುವತಿ ಅಮಾನುಷವಾಗಿ ಥಳಿಸಿ ಥಳಿಸಿದ ಆಘಾತಕಾರಿ ಘಟನೆ ಉತ್ತರಾಖಂಡ್‌ನ ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್‌ಗಂಜ್ ಪಟ್ಟಣದಲ್ಲಿ ವರದಿಯಾಗಿದೆ.
ಮಂಗಳವಾರ ನಡೆದ ಘಟನೆಯಲ್ಲಿ ನಿಶಾ ಅಹ್ಮದ್ ಎಂದು ಗುರುತಿಸಲಾದ ಸಂತ್ರಸ್ತ ಮಹಿಳೆಗೆ ತಲೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನ ಮೋಹಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಐಪಿಸಿ ಸೆಕ್ಷನ್ 354 , ಸೆಕ್ಷನ್ 323 ಮತ್ತು ಸೆಕ್ಷನ್ 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, “ನಿಶಾ ಅಹ್ಮದ್ ಅವರು ಡಿಸೆಂಬರ್ 19 ರಂದು ಖರೀದಿಸಿದ ಬ್ಯಾಡ್ಮಿಂಟನ್ ರಾಕೆಟ್ ಅನ್ನು ಬದಲಾಯಿಸಲು ಖತಿಮಾ ರಸ್ತೆಯಲ್ಲಿರುವ ಅಂಗಡಿಗೆ ಹೋಗಿದ್ದರು, ಅದರ ಕೆಲವು ನೆಟ್ಸ್ ಹಾಳಾಗಿದ್ದವು. ಆ ಸಮಯದಲ್ಲಿ ಅಂಗಡಿಯವನನ್ ಅಂಕಲ್ ಎಂದು ಸಂಬೋಧಿಸಿದಾಗ ಸಿಟ್ಟಿಗೆದ್ದ ವ್ಯಕ್ತಿ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ.
ನಿಶಾಳನ್ನು ಚಿಕಿತ್ಸೆಗೆಂದು ಕರೆದೊಯ್ದ ಆಸ್ಪತ್ರೆಯಿಂದ ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ಪೊಲೀಸರ ಮಧ್ಯಪ್ರವೇಶದ ನಂತರ ನಿಶಾಳ ತಂದೆ ಕೂಡ ಪೊಲೀಸರಿಗೆ ದೂರು ನೀಡಿದ್ದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy