nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿಕ್ಕ ದೇವಮ್ಮ ಬೆಟ್ಟಕ್ಕೆ ಸಚಿವ ರಾಜಣ್ಣ ಕುಟುಂಬ ಭೇಟಿ

    July 17, 2025

    ಸರಗೂರು:  ಕೋತಿಗಳ ಹಾವಳಿಯಿಂದ ಹೊರಗಡೆ ಬರಲು ಭಯವಾಗ್ತಿದೆ: ಸಾರ್ವಜನಿಕರಿಂದ ಆತಂಕ

    July 17, 2025

    ಶೇಂಬೆಳ್ಳಿ ಗ್ರಾ.ಪಂ. ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ

    July 17, 2025
    Facebook Twitter Instagram
    ಟ್ರೆಂಡಿಂಗ್
    • ಚಿಕ್ಕ ದೇವಮ್ಮ ಬೆಟ್ಟಕ್ಕೆ ಸಚಿವ ರಾಜಣ್ಣ ಕುಟುಂಬ ಭೇಟಿ
    • ಸರಗೂರು:  ಕೋತಿಗಳ ಹಾವಳಿಯಿಂದ ಹೊರಗಡೆ ಬರಲು ಭಯವಾಗ್ತಿದೆ: ಸಾರ್ವಜನಿಕರಿಂದ ಆತಂಕ
    • ಶೇಂಬೆಳ್ಳಿ ಗ್ರಾ.ಪಂ. ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ
    • ವಸತಿ ನಿಲಯಗಳ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಸಮಾಲೋಚನೆ ನಡೆಸಿ : ಸಿಇಓ ಡಾ.ಗಿರೀಶ್ ಬದೋಲೆ
    • ವೇಶ್ಯಾವಾಟಿಕೆ ಮಾಡಲು ಒಪ್ಪದ ಸಂಗಾತಿಯ ಬರ್ಬರ ಹತ್ಯೆ!
    • ಶಾಲಾ ಬಸ್ ಚಾಲಕ ಹೃದಯಾಘಾತದಿಂದ ಸಾವು
    • ಹೆಣ್ಣು ಮಗು ಎಂದು 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿದ ಪಾಪಿ
    • ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ ‘ಜಸ್ಟಿಸ್ ಫಾರ್ ಸೌಮ್ಯ’ ಚಿತ್ರ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಧ್ಯಮವರ್ಗದವರ ಆಶೋತ್ತರಗಳಿಗೆ ಸ್ಪಂದಿಸುವ ಕೇಂದ್ರ ಬಜೆಟ್: ಸೋಮಣ್ಣ ಬಣ್ಣನೆ
    ತುಮಕೂರು February 2, 2025

    ಮಧ್ಯಮವರ್ಗದವರ ಆಶೋತ್ತರಗಳಿಗೆ ಸ್ಪಂದಿಸುವ ಕೇಂದ್ರ ಬಜೆಟ್: ಸೋಮಣ್ಣ ಬಣ್ಣನೆ

    By adminFebruary 2, 2025No Comments3 Mins Read
    v somanna

    ತುಮಕೂರು:  ನವದೆಹಲಿಯಲ್ಲಿ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಭಾರತೀಯ ಮಧ್ಯಮ ವರ್ಗದವರ ಅಶೋತ್ತರಗಳಿಗೆ ಸ್ಪಂದಿಸುವ ಬಜೆಟ್. ಭಾರತೀಯ ಆರ್ಥಿಕತೆಗೆ ಆದ್ಯತೆ ನೀಡಿದ ಈ ಬಜೆಟ್ ಪ್ರಧಾನ ಮಂತ್ರಿಗಳ ವಿಕಸಿತ್ ಭಾರತದ ಕನಸನ್ನು ಸಾಕಾರ ಮಾಡಲಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೇಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಬಣ್ಣಸಿದ್ದಾರೆ.

    ಭಾರತ ಕೃಷಿಕರ ದೇಶ. ಬಜೆಟ್‌ನಲ್ಲಿ ಕೃಷಿಕರ ಎಳಿಗೆಗೆ ಪ್ರಧಾನ ಮಂತ್ರಿ ಧನಧ್ಯಾನ್ಯ ಕೃಷಿ ಯೋಜನೆಯನ್ನು 2025-26ರ ಬಜೆಟ್‌ನಲ್ಲಿ ಘೋಷಿಸಿದ್ದು, ಕಡಿಮೆ ಇಳುವರಿ ತಡೆಗಟ್ಟಲು ಪ್ರಥಮವಾಗಿ ದೇಶದ 100 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗಿದೆ. ಕೃಷಿಕರಿಗೆ ಉತ್ತಮ ಗುಣ ಮಟ್ಟದ ಬೀಜ, ರಸಗೊಬ್ಬರ ಖರೀದಿ ಮತ್ತು ತಂತ್ರಜ್ಷಾನ ಅಳವಡಿಕೆಗೆ ಈ ಯೋಜನೆ ಸಹಕಾರಿಯಾಗಲಿದೆ. ರಸಗೊಬ್ಬರದ ಉತ್ಪಾದನೆಯಲ್ಲಿ ಸ್ವಾವಲಂಬಿತ್ವ ಸಾಧಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಅಸ್ಸಾಂನಲ್ಲಿ 12.7 ಎಲ್.ಎಮ್.ಟಿ ಸಾಮರ್ಥ್ಯದ ಯೂರಿಯಾ ಪ್ಲಾಂಟ್ ಸ್ಥಾಪನೆಗೆ ಈ ಬಾರಿಯ ಬಜೆಟ್‌ನಲ್ಲಿ ಅವಕಾಶ ನೀಡಲಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.


    Provided by
    Provided by

    ದೇಶದಾದ್ಯಂತ ವೈದ್ಯಕೀಯ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲು 10ಸಾವಿರ ವೈದ್ಯಕೀಯ ಸೀಟುಗಳನ್ನು ಹೆಚ್ಚುವರಿಯಾಗಿ ಈ ಬಜೆಟ್‌ನಲ್ಲಿ ನೀಡಲಾಗಿದೆ. 36 ಜೀವ ರಕ್ಷಕ ಔಷಧಗಳಿಗೆ ಸಂಪೂರ್ಣ ಸುಂಕ ವಿನಾಯತಿ ನೀಡಲಾಗಿದೆ. ದೇಶೀಯ ಜೀವರಕ್ಷಕ ಔಷಧ ತಯಾರಿಕೆಗೆ ಸುಂಕ ವಿನಾಯಿತಿ ಮೂಲಕ ಉತ್ತೇಜನ ನೀಡಲಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳಾ ಉದ್ಯಮದಾರರಿಗೆ ಆರ್ಥಿಕ ಸೌಲಭ್ಯ ಒದಗಿಸುವ ನೂತನ ಯೋಜನೆ ಜಾರಿಗೊಳಿಸಲಾಗಿದೆ. ಗ್ರಾಮೀಣ ಭಾಗದ ಎಲ್ಲಾ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿಗೆ ಬ್ರಾಡ್-ಬ್ಯಾಂಡ್ ಸಂಪರ್ಕ ನೀಡಲು ಈ ಬಜೆಟ್‌ನಲ್ಲಿ ಅವಕಾಶ ನೀಡಲಾಗಿದೆ. ಹಳ್ಳಿಗಳ ಅಭಿವೃದ್ದಿಗೆ ಆದ್ಯತೆ ನೀಡಿ ಭಾರತೀಯ ಅಂಚೆ ನವೀಕರಿಸುವ ಮೂಲಕ ಗ್ರಾಮೀಣ ಭಾಗದ 1.5 ಲಕ್ಷ ಅಂಚೆ ಕೇಂದ್ರಗಳನ್ನು ಅಭಿವೃದ್ಧಿ ಮಾಡಲಾಗುವುದು. ಇದು ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಒತ್ತು ನೀಡಿದ ಬಜೆಟ್ ಎಂದು ಕೇಂದ್ರ ಸಚಿವ ವಿ. ಸೋಮಣ್ಣನವರು ತಿಳಿಸಿದ್ದಾರೆ.

    ಈಗಾಗಲೇ 68 ಲಕ್ಷ ರಸ್ತೆ ಬದಿ ವ್ಯಾಪಾರಿಗಳಿಗೆ ಉಪಯೋಗವಾಗಿರುವ ಪಿ.ಎಮ್. ಸ್ವನಿಧಿಯ ಯೋಜನೆಯನ್ನು ಪರಿಷ್ಕರಿಸಿ ಹೆಚ್ಚುವರಿ ಸಾಲ ಸೌಲಭ್ಯಗಳಿಗೆ ಆದ್ಯತೆ ನೀಡಲಾಗಿದೆ. ದೇಶದಾದ್ಯಂತ 50 ಪ್ರವಾಸಿ ತಾಣಗಳನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.

    ಕೇಂದ್ರದ ಜಲಶಕ್ತಿ ಇಲಾಖೆಯಡಿ ‘ಜಲ್ ಜೀವನ್ ಮಿಷನ್ ಯೋಜನೆ’ಯನ್ನು 2019ರಲ್ಲಿ ಪ್ರಧಾನಮಂತ್ರಿಗಳು ಜಾರಿಗೆ ತಂದಿದ್ದು, ಈವರೆಗೆ 19.36 ಕೋಟಿ ಮನೆಗಳಿಗೆ ಕೊಳವೆ ಮೂಲಕ ಶುದ್ದ ಕುಡಿಯುವ ನೀರನ್ನು ಕಲ್ಪಿಸಲಾಗಿದೆ. 2028ರ ಹೊತ್ತಿಗೆ ಶೇ.100ರಷ್ಟು ಗುರಿ ಸಾಧಿಸುವ ಸಂಕಲ್ಪ ಮಾಡಲಾಗಿದೆ. ಇದಕ್ಕೆ ಬೇಕಾದ ಅವಶ್ಯಕ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆಯೆಂದು ತಿಳಿಸಿದ್ದಾರೆ.

    ರೇಲ್ವೆ ಇಲಾಖೆಗೆ ಕಳೆದ ಸಾಲಿನಲ್ಲಿ 2.65ಲಕ್ಷ ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಜೆಟ್ನಲ್ಲಿಯೂ ಸಹ 2.65 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ. ಈ ಪೈಕಿ ಪ್ರಯಾಣಿಕರ ಸವಲತ್ತುಗಳಿಗಾಗಿ 12 ಸಾವಿರ ಕೋಟಿ ರೂ., ಸುರಕ್ಷತೆ ವ್ಯವಸ್ಥೆಗಳಿಗಾಗಿ 1,16,500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.(ಕಳೆದ ವರ್ಷ 1,14,000 ಕೋಟಿ ರೂ.ಗಳ ಅನುದಾನ ಕಲ್ಪಿಸಲಾಗಿತ್ತು.)

    ರೇಲ್ವೆ ಸುರಕ್ಷತೆಗೆ ಕವಚ್ 4ಓ ಯೋಜನೆ ಜಾರಿಗೊಳಿಸಿದೆ. ಸುಮಾರು 10,000 ರೇಲ್ವೆ ಇಂಜಿನ್‌ಗಳಿಗೆ ಕವಚ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ನವದೆಹಲಿ – ಮುಂಬೈ ಮತ್ತು ನವದೆಹಲಿ-ಕಲ್ಕತ್ತಾ ಮಾರ್ಗದಲ್ಲಿ ಡಿಸೆಂಬರ್ 2025ರಲ್ಲಿ ಕವಚ್ ಅಳವಡಿಕೆ ಮುಗಿಯಲಿದೆಯೆಂದು ತಿಳಿಸಿದ್ದಾರೆ.

    2025 ಭಾರತೀಯ ರೇಲ್ವೆಯ ವಿದ್ಯುದೀಕರಣ ಶತಮಾನೋತ್ಸವ ವರ್ಷವೆಂದು ಬಣ್ಣಿಸಿ, ಶೇ.100ರಷ್ಟು ಇಲೆಕ್ಟಿçಫಿಕೇಶನ್ ಕಾರ್ಯವನ್ನು ಮುಗಿಸಲಾಗುವುದು. 2025-26ರಲ್ಲಿ ಟಿoಟಿ ಚಿಛಿ ಅಮೃತ್ ಭಾರತ್ ರೈಲು ಪ್ರಾರಂಭಿಸಲಾಗುವುದು. ಪ್ರಾರಂಭದಲ್ಲಿ 100 ಅಮೃತ್ ಭಾರತ್ ರೇಲ್ವೆ ತಯಾರಿಸಲಾಗುವುದು. ಅಮೃತ್ ಭಾರತ್ ರೇಲ್ವೆಯಲ್ಲಿ ಆಹ್ಲಾದಕರ ಪ್ರಯಾಣ ವ್ಯವಸ್ಥೆ ದೊರಕಲಿದೆ. ಮುಂದಿನ 4 ವರ್ಷಗಳಲ್ಲಿ 1300ಕ್ಕೂ ಹೆಚ್ಚು ರೇಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ವಂದೇ ಭಾರತ್ ಸ್ಲೀಪರ್ ಕೋಚ್ ಪರೀಕಾರ್ಥವಾಗಿ ಚಲನೆಯಲ್ಲಿದೆ. 50 ವಂದೇ ಭಾರತ್ ಸ್ಲೀಪರ್ ಟ್ರೇನ್‌ಗಳನ್ನು 2025-26 ಮತ್ತು 2026-27ರಲ್ಲಿ ಸಿದ್ದಪಡಿಸಿ ಲೋಕಾರ್ಪಣೆಗೊಳಿಸಲಾಗುವುದು. ಇವು ದೂರದ ಪ್ರಯಾಣಕ್ಕೆ ಅನುಕೂಲವಾಗಲಿದೆಯೆಂದು ತಿಳಿಸಿದ್ದಾರೆ.

    ಕಳೆದ ಬಾರಿ ಕರ್ನಾಟಕಕ್ಕೆ ರೇಲ್ವೆ ಬಜೆಟ್ 7559 ಕೋಟಿ ರೂ.ಗಳನ್ನು ನೀಡಲಾಗಿತ್ತು. ಈ ಬಾರಿ ಕರ್ನಾಟಕಕ್ಕೆ ರೇಲ್ವೆ ಬಜೆಟ್ 7564 ಕೋಟಿ ರೂ.ಗಳನ್ನು ನೀಡಲಾಗಿದೆ. ಸಬ್ ಅರ್ಬನ್ ರೇಲ್ವೆಗೆ ಕಳೆದ ಬಾರಿ 350 ಕೋಟಿ ರೂ.ಗಳನ್ನು ನೀಡಲಾಗಿತ್ತು. ಈ ಬಜೆಟ್‌ನಲ್ಲಿಯೂ ಸಹ 350 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಜನಪ್ರಿಯ ಬಜೆಟ್ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳನ್ನು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ರೇಲ್ವೆ ಹಾಗೂ ಜಲ ಜೀವನ್ ಮಿಶನ್‌ಗೆ ಆದ್ಯತೆ ನೀಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ನಾನು ಅತ್ಯಂತ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ತಿಳಿಸಿರುವ ಅವರು ಇದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ ‘ಜಸ್ಟಿಸ್ ಫಾರ್ ಸೌಮ್ಯ’ ಚಿತ್ರ

    July 17, 2025

    ತುಮಕೂರಿಗೆ ಹೆಮ್ಮೆ: ಗೊಲನ ಎಂಟರ್‌ ಪ್ರೈಸಸ್‌ ಗೆ ಕೇಂದ್ರ ಸರ್ಕಾರದ ಮಾನ್ಯತೆ

    July 12, 2025

    ಅಕ್ರಮ ಭೂಕಬಳಿಕೆ ಆರೋಪ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗೆ ಸನ್ಮಾನಿಸಲು ಯತ್ನಿಸಿದ KRS ಪಕ್ಷದ ಕಾರ್ಯಕರ್ತರು ಪೊಲೀಸ್ ವಶಕ್ಕೆ

    July 11, 2025
    Our Picks

    ವೇಶ್ಯಾವಾಟಿಕೆ ಮಾಡಲು ಒಪ್ಪದ ಸಂಗಾತಿಯ ಬರ್ಬರ ಹತ್ಯೆ!

    July 17, 2025

    ಯೆಮೆನ್ ನಲ್ಲಿ ನರ್ಸ್ ನಿಮಿಷಾ ಪ್ರಿಯಾ ಮರಣ ದಂಡನೆ ಮುಂದೂಡಿಕೆ

    July 16, 2025

    ಕರ್ನಾಟಕದ ಬೆಳವಣಿಗೆಗೆ ಹೊಸ ರಸ್ತೆಗಳ ಅಭಿವೃದ್ಧಿ: ನಿತಿನ್ ಗಡ್ಕರಿ

    July 15, 2025

    ಅಪಘಾತದಲ್ಲಿ ಪತ್ನಿ ಮಗ ಸಾವಿನ ಖಿನ್ನತೆಯಲ್ಲಿರುವಾಗಲೇ  ಹಿರಿಯ ಮ್ಯಾರಥಾನ್‌ ಓಟಗಾರ ಅಪಘಾತಕ್ಕೆ ಬಲಿ

    July 15, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಚಿಕ್ಕ ದೇವಮ್ಮ ಬೆಟ್ಟಕ್ಕೆ ಸಚಿವ ರಾಜಣ್ಣ ಕುಟುಂಬ ಭೇಟಿ

    July 17, 2025

    ಸರಗೂರು:  ತಾಲೂಕಿನ ಚಿಕ್ಕ ದೇವಮ್ಮ ಬೆಟ್ಟಕ್ಕೆ ಸಹಕಾರ ಸಚಿವ ಎನ್.ಕೆ.ರಾಜಣ್ಣ ಕುಟುಂಬ ಸದಸ್ಯರಾದ ಮಗಳು ರಶ್ಮಿ ಮತ್ತು ಸೊಸೆ ಭಾವನಾ…

    ಸರಗೂರು:  ಕೋತಿಗಳ ಹಾವಳಿಯಿಂದ ಹೊರಗಡೆ ಬರಲು ಭಯವಾಗ್ತಿದೆ: ಸಾರ್ವಜನಿಕರಿಂದ ಆತಂಕ

    July 17, 2025

    ಶೇಂಬೆಳ್ಳಿ ಗ್ರಾ.ಪಂ. ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ

    July 17, 2025

    ವಸತಿ ನಿಲಯಗಳ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಸಮಾಲೋಚನೆ ನಡೆಸಿ : ಸಿಇಓ ಡಾ.ಗಿರೀಶ್ ಬದೋಲೆ

    July 17, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.