ತುಮಕೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಎನ್.ನರಸಿಂಹರಾಜುಯವರನ್ನು ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ವಿ.ಗೋವಿಂದರೆಡ್ಡಿ, ತಿಳಿಸಿದ್ದಾರೆ.
ಶುಕ್ರವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಪರಶಿವಮೂರ್ತಿ ಹಾಗೂ ರಮೇಶ್ ಹೆಚ್.ಇ. ಅವರು ನಾಮಪತ್ರ ಹಿಂಪಡೆದು ಎನ್.ನರಸಿಂಹರಾಜು ಅವರಿಗೆ ಬೆಂಬಲ ನೀಡಿದರು. ಹಿಂದಿನ ಎಲ್ಲಾ ಚುನಾವಣೆಗಳಿಗಿಂತÀ ಅತ್ಯಂತ ಸ್ಪರ್ಧಾತ್ಮಕವಾಗಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುಣಾವಣೆ ತೀವ್ರ ಕುತೂಹಲ ಕೆರಳಿಸಿತ್ತು, ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ, ರಾಜ್ಯ ಪರಿಷತ್ ಸದಸ್ಯ ಸ್ಥಾನ ಮತ್ತು ಖಜಾಂಚಿ ಸ್ಥಾನಕ್ಕೆ ಮಾತ್ರ ಡಿಸೆಂಬರ್ ೪ ರಂದು ಚುನಾವಣೆ ನಡೆಯಬೇಕಿತ್ತು. ಈ ಮೂರು ಸ್ಥಾನಗಳಿಗೆ ತಲಾ ಮೂವರು ನಾಮಪತ್ರ ಸಲ್ಲಿಸಿದ್ದರು, ಕೊನೆಗಳಿಗೆಯಲ್ಲಿ ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲ ಸ್ಥಾನಗಳಿಂದಲೂ ಒಬ್ಬೊಬ್ಬರ ಹೊರತಾಗಿ ಉಳಿದೆಲ್ಲಾ ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿದರು, ಇದರಿಂದ ಚುನಾವಣೆಗೆ ಮೊದಲೇ ಸಂಘದ ಅಧ್ಯಕ್ಷರಾಗಿ ಎನ್.ನರಸಿಂಹರಾಜು, ರಾಜ್ಯ ಪರಿಷತ್ ಸದಸ್ಯರಾಗಿ ಗಂಗಾಧರ್ ಘಟ್ಟಿ ಹಾಗೂ ಖಜಾಂಚಿಯಾಗಿ ಡಿ.ಆರ್ ಹರೀಶ್ ಕುಮಾರ್ ಇವರ ಅವಿರೋಧ ಆಯ್ಕೆಯನ್ನು ಚುನಾಣಾವಣಾಧಿಕಾರಿ ವಿ.ಗೋವಿಂದರೆಡ್ಡಿ, ಹಾಗೂ ಸಹಾಯಕ ಚುನಾವಣಾಧಿಕಾರಿ ಎಸ್.ಪಿ ಮಂಜುನಾಥ್ ಘೋಷಣೆ ಮಾಡಿದರು.
ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಕ್ಕೆ ಈಚೆಗಷ್ಟೇ ಚುನಾವಣೆ ನಡೆದಿತ್ತು. ಒಟ್ಟು ೭೦ ಮಂದಿ ನಿರ್ದೇಶಕರ ಪೈಕಿ ೩೮ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ೩೨ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಲೋಕೋಪಯೋಗಿ ಇಲಾಖೆಯ ರಾಧಾಕೃಷ್ಣ, ಜಿಲ್ಲಾ ಸಂಖ್ಯೆ ಸಂಗ್ರಹಣಾ ಇಲಾಖೆಯ ರವಿಕುಮಾರ್, ಆಹಾರ ಇಲಾಖೆಯ ಚ್ಯೇತ್ರಗೌಡ, ಎನ್.ಸಿ.ಸಿ ವಿಭಾಗದ ಕುಮಾರ್, ತಾಂತ್ರಿಕ ಶಿಕ್ಷಣ ಇಲಾಖೆಯ ಷಡಾಕ್ಷರಿ, ವಾರ್ತಾ ಇಲಾಖೆಯ ಯೋಗೇಶಗೌಡ, ಖಜಾನೆ ಇಲಾಖೆಯ ಅಮರನಾಥ.ಪಿ, ಆರೋಗ್ಯ ಇಲಾಖೆಯ ಹರೀಶ್, ವಿಮಾ ಇಲಾಖೆಯ ಕಿರಣ್, ಪ್ರಾಥಮಿಕ ಶಿಕ್ಷಣ ಇಲಾಖೆಯ ಮಂಜುಳಾ, ಸೇರಿದಂತೆ ಮತ್ತಿತರು ಆಯ್ಕೆಯಾಗಿದ್ದರು.
ನಿರ್ದೆಶಕರ ಚುನಾವಣೆ ಬಳಿಕ ಜಿಲ್ಲಾ ಘಟಕದ ಅಧ್ಯಕ್ಷರು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ, ನಾಮಪತ್ರ ಸಲ್ಲಿಕೆಗೆ ನ.೨೭ ಕೊನೆಯ ದಿನವಾಗಿದ್ದು, ಡಿಸೆಂಬರ್ ೪ಕ್ಕೆ ಚುನಾವಣೆ ನಿಗದಿಯಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx