ನವದೆಹಲಿ: ಗಡಿ ನಿಯಂತ್ರಣ ರೇಖೆ ಮತ್ತು ಜಮ್ಮು–ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಗಳಲ್ಲಿ ಫಿರಂಗಿ ದಾಳಿ ಹಾಗೂ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಕ್ಕಳು ಮತ್ತು ಒಬ್ಬರು ಯೋಧರು ಸೇರಿದಂತೆ ಕನಿಷ್ಠ 15 ಜನರು ಮೃತಪಟ್ಟು 43 ಜನರು ಗಾಯಗೊಂಡಿದ್ದಾರೆ.
ಮೃತರನ್ನು ಬಲ್ವಿಂದರ್ ಕೌರ್ ಅಲಿಯಾಸ್ ರುಬಿ (33), ಮೊಹಮ್ಮದ್ ಜೈನ್ ಖಾನ್ (10), ಅವರ ಅಕ್ಕ ಜೋಯಾ ಖಾನ್ (12), ಮೊಹಮ್ಮದ್ ಅಕ್ರಮ್ (40), ಅಮ್ರಿಕ್ ಸಿಂಗ್ (55), ಮೊಹಮ್ಮದ್ ಇಕ್ಬಾಲ್ (45), ರಂಜೀತ್ ಸಿಂಗ್ (48), ಶಕೀಲಾ ಬಿ (40), ಅಮರ್ಜೀತ್ ಸಿಂಗ್ (47), ಮರಿಯಮ್ ಖಾಟೂನ್ (7), ವಿಹಾನ್ ಭಾರ್ಗವ್ (13) ಮತ್ತು ಮೊಹಮ್ಮದ್ ರಫಿ (40) ಮತ್ತು ಸೇನೆಯ ಲ್ಯಾನ್ಸ್ ನಾಯಕ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದ ನಂತರ ಪಾಕಿಸ್ತಾನ ಪಡೆಗಳು ಕದನ ವಿರಾಮ ಉಲ್ಲಂಘಿಸುತ್ತಿರುವ ಬಗ್ಗೆ ಭಾರತೀಯ ಸೇನೆಯು ಸಮಾನ ಪ್ರಮಾಣದಲ್ಲಿ ಶೆಲ್ ದಾಳಿಗೆ ಪ್ರತಿಕ್ರಿಯಿಸುತ್ತಿದೆ. ಪಾಕಿಸ್ತಾನದ ಅನಿಯಂತ್ರಿತ ಶೆಲ್ ದಾಳಿಯು ಗುರುದ್ವಾರ ಸೇರಿದಂತೆ ಮನೆಗಳು, ವಾಹನಗಳು ಮತ್ತು ವಿವಿಧ ಕಟ್ಟಡಗಳನ್ನು ನಾಶಪಡಿಸಿತು. ಗಡಿ ನಿವಾಸಿಗಳಲ್ಲಿ ಭೀತಿಯನ್ನು ಸೃಷ್ಟಿಸಿತು, ನೂರಾರು ನಿವಾಸಿಗಳು ಭೂಗತ ಬಂಕರ್ ಗಳಲ್ಲಿ ಆಶ್ರಯ ಪಡೆಯಬೇಕಾಯಿತು ಅಥವಾ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————