ಕೇಂದ್ರ ಲೋಕಸೇವಾ ಆಯೋಗವು (UPSC) 2026ರ ಸಾಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಮತ್ತು ನೌಕಾ ಅಕಾಡೆಮಿ (NA-I) ಪರೀಕ್ಷೆಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಭಾರತೀಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಅಧಿಕಾರಿಯಾಗಬಯಸುವ ಯುವಕ-ಯುವತಿಯರಿಗೆ ಇದು ಸುವರ್ಣಾವಕಾಶವಾಗಿದೆ.
ಈ ನೇಮಕಾತಿಯ ಮೂಲಕ ಒಟ್ಟು 394 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಭೂಸೇನೆಯ 208, ನೌಕಾಪಡೆಯ 42, ವಾಯುಪಡೆಯ 120 ಮತ್ತು ನೌಕಾ ಅಕಾಡೆಮಿಯ 24 ಹುದ್ದೆಗಳು ಸೇರಿವೆ. ಈ ಬಾರಿ ಪುರುಷರ ಜೊತೆಗೆ ಮಹಿಳಾ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಹತೆಗಳು: ಭೂಸೇನೆಗೆ ಅರ್ಜಿ ಸಲ್ಲಿಸುವವರು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (ಪಿಯುಸಿ) ಉತ್ತೀರ್ಣರಾಗಿರಬೇಕು. ನೌಕಾಪಡೆ ಮತ್ತು ವಾಯುಪಡೆಗೆ ವಿಜ್ಞಾನ ವಿಭಾಗದಲ್ಲಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) 12ನೇ ತರಗತಿ ಪೂರೈಸಿರುವುದು ಕಡ್ಡಾಯ. ಪ್ರಸ್ತುತ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
ಶುಲ್ಕ ಮತ್ತು ವೇತನ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವಿದ್ದು, ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಆಯ್ಕೆಯಾದ ಕೆಡೆಟ್ ಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ 56,100 ರೂ. ಸ್ಟೈಫಂಡ್ ನೀಡಲಾಗುತ್ತದೆ. ನೇಮಕಾತಿ ನಂತರ ಆಕರ್ಷಕ ವೇತನದ ಜೊತೆಗೆ ಮಿಲಿಟರಿ ಸೇವಾ ವೇತನ (MSP) ಮತ್ತು ವಿವಿಧ ಭತ್ಯೆಗಳು ಲಭ್ಯವಿರುತ್ತವೆ. ಆಸಕ್ತರು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


