ಬಟ್ಟೆಯ ವಿಚಾರಗಳಿಗೆ ಸಂಬಂಧಿಸಿದಂತೆ ಒಂದಲ್ಲ ಒಂದು ವಿವಾದಕ್ಕೀಡಾಗುವ ಬಾಲಿವುಡ್ ಬೆಡಗಿ ಉರ್ಫಿ ಜಾವೇದ್ ಇದೀಗ ಸೌತ್ ನಟಿ ಸಮಂತಾ ನನ್ನ ಫ್ರೆಂಡ್ ಅಂತ ಕಥೆ ಕಟ್ಟಿ ಸುದ್ದಿಯಾಗಿದ್ದಾರೆ.
ಫಾಲೋ ಕರ್ ಲೋ ಯಾರ್ ಶೋನಲ್ಲಿ, ತನ್ನ ಪ್ರಚಾರಕ್ಕಾಗಿ ಉರ್ಫಿ ಈ ಹೇಳಿಕೆ ನೀಡಿದ್ದು, ಇದರ ಸಂದರ್ಶನದಲ್ಲಿ ಸಮಂತಾ ನನ್ನ ಫ್ರೆಂಡ್ ಎಂದಿದ್ದಾರೆ. ನಾನು ಸಮಂತಾ ಇನ್ಸ್ಟಾಗ್ರಾಂ ಫ್ರೆಂಡ್ಸ್, ನನ್ನ ವಿಡಿಯೋ ಇಷ್ಟವಾದ್ರೆ ಅದನ್ನು ಅವರ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡುತ್ತಾರೆ ಎಂದು ಉರ್ಫಿ ಹೇಳಿದ್ದಾರೆ.
ನಾನು ಅವರ ಜೊತೆ ಆಗಾಗ ಇನ್ಸ್ಟಾಗ್ರಾಂನಲ್ಲಿ ಮಾತನಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದೇ ಶೋನಲ್ಲಿ ಮಾತನಾಡಿರುವ ಅವರು ನಾನು 3 ವರ್ಷಗಳಿಂದ ಸೆಕ್ಸ್ ಮಾಡಿಲ್ಲ ಅಂತ ಹೇಳಿಕೆ ನೀಡಿದ್ದರು. ನನ್ನ ಬಳಿ ಎಲ್ಲಿಯವರೆಗೂ ಪ್ರೈವೇಟ್ ಜೆಟ್ ಇರುವುದಿಲ್ಲವೋ ಅಲ್ಲಿ ತನಕ ಸೆಕ್ಸ್ ಮಾಡಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ ಎಂದು ಅವರು ಹೇಳಿದ್ದರು.
ಅಂದ ಹಾಗೆ, ಇದೆಲ್ಲ ಶೋ ಪ್ರಚಾರಕ್ಕಾಗಿ ನೀಡುವ ಹೇಳಿಕೆಗಳಾಗಿವೆ. ಜನ ಶೋಗಳನ್ನು ನೋಡಬೇಕು ಅಂತ ಇಂತಹ ಚೀಪ್ ಗೀಮಿಕ್ ಗಳನ್ನು ನಡೆಸ್ತಲೇ ಇರುತ್ತಾರೆ ಅಂತ ಸಾಕಷ್ಟು ಜನರು ಟೀಕಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


