ಗಾಂಜಾ ಸೇವನೆಯನ್ನು ದೃಢಪಡಿಸಲು ವೈದ್ಯರು ಮೂತ್ರ, ಸಲೈವ, ಕೂದಲಿನ ಪರೀಕ್ಷೆಯನ್ನು ನಡೆಸುತ್ತಿದ್ದರು. ಅದರ ವರದಿ ಸಿಗಲು ವಿಳಂಬವಾಗುತ್ತಿತ್ತು. ಇದನ್ನು ತಪ್ಪಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದ್ದು, ಕೇವಲ ಸೆಕೆಂಡುಗಳಲ್ಲಿ ಗಾಂಜಾ ಸೇವಿಸಿದ್ದೀರಿ, ಇಲ್ಲ ಎಂಬುದನ್ನು ಪತ್ತೆಹಚ್ಚಬಲ್ಲದು.
ನ್ಯೂಜೆರ್ಸಿಯ ಸಂಶೋಧಕ ಸ್ಯಾಂಗ್ ವನ್ ಬೀ ನೇತೃತ್ವದ ತಂಡ ಇಂಥದ್ದೊಂದು ಸಂಶೋಧನೆ ನಡೆಸಿದ್ದು, 30 ಮಂದಿಯನ್ನು ಪ್ರಯೋಗಕ್ಕೂ ಒಳಪಡಿಸಿ ಯಶಸ್ವಿಯಾಗಿದೆ.


