nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ: ಸಚಿವ ಎಂ.ಬಿ.ಪಾಟೀಲ್‌

    October 23, 2025

    ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಸಿಎಂಗೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ

    October 23, 2025

    ಮೈಸೂರು: ಭ್ರೂಣಹತ್ಯೆ ಜಾಲ ಪತ್ತೆ : 7 ಮಂದಿಯ ವಿರುದ್ಧ ಪ್ರಕರಣ ದಾಖಲು

    October 23, 2025
    Facebook Twitter Instagram
    ಟ್ರೆಂಡಿಂಗ್
    • ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ: ಸಚಿವ ಎಂ.ಬಿ.ಪಾಟೀಲ್‌
    • ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಸಿಎಂಗೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ
    • ಮೈಸೂರು: ಭ್ರೂಣಹತ್ಯೆ ಜಾಲ ಪತ್ತೆ : 7 ಮಂದಿಯ ವಿರುದ್ಧ ಪ್ರಕರಣ ದಾಖಲು
    • ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ: ಈ ಬಾರಿ ದಾಖಲೆ
    • ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪೇನಿದೆ?: ಪರಮೇಶ್ವರ್ ಪ್ರಶ್ನೆ
    • ದೇಶಿ ಕೋಳಿ ಮರಿಗಳ ವಿತರಣೆ : ಮಹಿಳೆಯರಿಂದ ಅರ್ಜಿ ಆಹ್ವಾನ
    • ಅಕ್ಟೋಬರ್ 31:  ಕುಂಚಿಗರ ಸಂಘದ ನೂತನ ಭವನದ ಉದ್ಘಾಟನೆ
    • ದೀಪಾವಳಿ: ಜೈ ಭೀಮ್ ಅಂಬೇಡ್ಕರ್ ಹುಡುಗರಿಂದ ಎತ್ತಿನಗಾಡಿ ಓಟ ಸ್ಪರ್ಧೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಉತ್ತಮ ಸಮಾಜ ಸೃಷ್ಟಿಸುವಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು | ಸಚಿವ ಬಿ.ಸಿ.ನಾಗೇಶ್
    ತುಮಕೂರು December 19, 2021

    ಉತ್ತಮ ಸಮಾಜ ಸೃಷ್ಟಿಸುವಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು | ಸಚಿವ ಬಿ.ಸಿ.ನಾಗೇಶ್

    By adminDecember 19, 2021No Comments2 Mins Read
    b c nagesh

    ತುಮಕೂರು: ಉತ್ತಮ ಸಮಾಜವನ್ನು  ಸೃಷ್ಟಿಸುವಲ್ಲಿ ಶಿಕ್ಷಕರು, ಅಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆಯ ಎಲ್ಲಾ  ಸಿಬ್ಬಂದಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪ್ರಾಥಮಿಕ  ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

    ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಂದು ಜಿಲ್ಲಾ  ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ  ಕಚೇರಿ ಸಹಯೋಗದಲ್ಲಿಂದು ಆಯೋಜಿಸಿದ್ದ ನಗರದ ಎಸ್‌.ಬಿ.ಎಂ. ಮುಖ್ಯ ರಸ್ತೆಯಲ್ಲಿರುವ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ  ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಳಿತು-ಕೆಡುಕು  ಎರಡನ್ನೂ ಗುರುತಿಸುವ ಹಾಗೂ ಒಳ್ಳೆಯದನ್ನು ಸೃಷ್ಟಿಸಿ ಕೆಟ್ಟದ್ದನ್ನು ಶಿಕ್ಷಿಸುವ ಜವಾಬ್ದಾರಿ ಮತ್ತು ಶಕ್ತಿ ಎರಡೂ ಕೇವಲ ಶಿಕ್ಷಕನಿಗೆ ಮಾತ್ರ  ಇರುವಂಥದ್ದು. ಪುರಾತನ ಕಾಲದಲ್ಲಿ ಚಾಲ್ತಿಯಲ್ಲಿದ್ದ ಗುರುಕುಲ ಶಿಕ್ಷಣ  ಪದ್ಧತಿಯಿಂದ ಈಗಿನವರೆಗೂ ಗುರುವಿಗೆ ತನ್ನದೇ ಆದ ಸ್ಥಾನ-ಮಾನವಿದೆ. ಪ್ರತಿಯೊಂದು ಮಗುವು ಒಬ್ಬ ಶಿಕ್ಷಕನಲ್ಲಿ ಜ್ಞಾನ ಮತ್ತು  ಚಾರಿತ್ರ್ಯಗಳೆರಡನ್ನೂ ಗುರುತಿಸುತ್ತಿರುತ್ತದೆ. ಅಂತಹ ಶ್ರೇಷ್ಟ  ಸ್ಥಾನದಲ್ಲಿರುವಾತ ಮಗುವಿಗೆ ಮಾದರಿಯಾಗಿ ಮುಂದಿನ ಭವಿಷ್ಯಕ್ಕೆ  ದಾರಿದೀಪವಾಗಬೇಕು ಎಂದರು.


    Provided by
    Provided by
    Provided by

    ಗುರುತರ ಜವಾಬ್ದಾರಿಯನ್ನು ನಿರ್ವಹಿಸುವುದು ಅತ್ಯಂತ ಸೂಕ್ಷ್ಮ ಕೆಲಸವಾಗಿದೆ. ದೇಶದಲ್ಲಿ ಗಡಿ ಕಾಯುವ ಯೋಧನ ಪಾತ್ರ ಎಷ್ಟು  ಪ್ರಾಮುಖ್ಯತೆ ಹೊಂದಿದೆಯೋ ಸಮಾಜದಲ್ಲಿ ಭವಿಷ್ಯದ ಉತ್ತಮ ನಾಗರಿಕರನ್ನು  ಮಾನಸಿಕವಾಗಿ ತಯಾರು ಮಾಡುವಲ್ಲಿ ಶಿಕ್ಷಕರ ಪಾತ್ರವೂ ಅಷ್ಟೇ  ಪ್ರಮುಖವಾಗಿದೆ ಎಂದು ತಿಳಿಸಿದರು.

    ಸಮಾಜದಲ್ಲಿ ಮಾನವೀಯ ಮತ್ತು ಪ್ರಾಮಾಣಿಕವಾಗಿ ಕಾರ್ಯ  ನಿರ್ವಹಿಸುತ್ತಿರುವವರಿಗೆ ಸಹಾಯಕ್ಕಿಂತ ಪ್ರೋತ್ಸಾಹ ಮುಖ್ಯ. ಈ ನಿಟ್ಟಿನಲ್ಲಿ  ಸರ್ಕಾರವು ಪಾಲಿಕೆಯಲ್ಲಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೂ  ರಾಜ್ಯೋತ್ಸವ ಪ್ರಶಸ್ತಿ ನೀಡಲು ಮುಂದಾಗಿದೆ ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಗುರುವಿನ ಸ್ಥಾನವು ಸೃಷ್ಟಿಕರ್ತ  ಬ್ರಹ್ಮನಿಗೂ ಮಿಗಿಲಾದದ್ದು. ಸೃಷ್ಟಿಯಲ್ಲಿ ಹೆಚ್ಚು ಗೌರವಕ್ಕೆ ಪಾತ್ರವಾಗುವ  ಸ್ಥಾನ ಗುರುವಿನದ್ದು. ಗುರುವು ಕೇವಲ ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ,

    ಜೀವನದ ಮಹತ್ವ, ಅರಿವು, ಕತ್ತಲೆಯಲ್ಲಿರುವವರಿಗೆ ಬೆಳಕು ತೋರಿಸುವ  ಮಾರ್ಗದರ್ಶಿಯಾಗಿರುತ್ತಾನೆ ಎಂದರಲ್ಲದೆ, ಶಿಕ್ಷಣ ಇಲಾಖೆ ಎಂಬುದು ರಾಷ್ಟ್ರದ ಮೊದಲ ಪ್ರಜೆಯಿಂದ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಯ ವ್ಯಕ್ತಿತ್ವದ  ನಿರ್ಮಾತೃ. ಪ್ರತೀ ತಾಲೂಕಿನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ  ಕಾರ್ಯಾಲಯವು ತನ್ನ ವ್ಯಾಪ್ತಿಯ ಶಿಕ್ಷಕರ ಸಮಸ್ಯೆಗಳನ್ನು  ಬಗೆಹರಿಸಬೇಕು.  ಶಿಕ್ಷಕನೆಂದರೆ ಮಕ್ಕಳೊಡಗೂಡಿ ಸಮಾಜದ ನಾಗರಿಕರಿಗೂ  ಮಾದರಿಯಾಗಬೇಕು. ಶಿಕ್ಷಕರು, ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ  ನಿರ್ವಹಿಸಬೇಕಾದರೆ ಅವರ ಮೇಲಾಧಿಕಾರಿಗಳು ಅಷ್ಟೇ ಪ್ರಾಮಾಣಿಕವಾಗಿದ್ದು, ಸ್ಪೂರ್ತಿ ನೀಡುವಂತಹ ಪರಿಸರ ಸೃಷ್ಟಿಮಾಡಬೇಕು ಎಂದರು.

    ನಂತರ ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯ್ಕ, ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ,  ಉಪನಿರ್ದೇಶಕ ಹಾಗೂ ಡಯಟ್ ಪ್ರಾಂಶುಪಾಲ ಮಂಜುನಾಥ್ ಕೆ, ಬಸವರಾಜು,  ಕುಮುದಮ್ಮ ಹಾಗೂ ರಂಗಧಾಮಪ್ಪರಿಗೆ ಸನ್ಮಾನ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ ಷಹಪುರವಾಡ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಎನ್. ಸೇರಿದಂತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

    ವರದಿ: ರಾಜೇಶ್ ರಂಗನಾಥ್, ತುಮಕೂರು

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

     

    admin
    • Website

    Related Posts

    ದೇಶಿ ಕೋಳಿ ಮರಿಗಳ ವಿತರಣೆ : ಮಹಿಳೆಯರಿಂದ ಅರ್ಜಿ ಆಹ್ವಾನ

    October 23, 2025

    ಜೂನಿಯರ್ ಕಾಲೇಜು ಮೈದಾನದ ತುಂಬಾ ಕಾಲಿಟ್ಟ ಕಡೆಯಲ್ಲಿ ಮೊಳೆಗಳು: ಜಿಲ್ಲಾಡಳಿತದ ನಿರ್ಲಕ್ಷ್ಯ!

    October 22, 2025

    ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಿನಲ್ಲಿ ಕಂಪೆನಿ ನಿರ್ವಾಹಕನಿಗೆ ಪಂಗನಾಮ!

    October 21, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ: ಸಚಿವ ಎಂ.ಬಿ.ಪಾಟೀಲ್‌

    October 23, 2025

    ಬೆಂಗಳೂರು:  ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ ‍ನಲ್ಲಿ ಬಹಳಷ್ಟು ನಾಯಕರು ಸಮರ್ಥರಿದ್ದಾರೆ. ಬಿಜೆಪಿಯಂತೆ ನಾಯಕತ್ವದ ದಿವಾಳಿ ನಮ್ಮಲ್ಲಿ ಇಲ್ಲ ಎಂದು ಬೃಹತ್‌ ಮತ್ತು…

    ಕಿತ್ತೂರ ರಾಣಿ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ: ಸಿಎಂಗೆ ಕೇಂದ್ರ ಸಚಿವ ವಿ.ಸೋಮಣ್ಣ ಪತ್ರ

    October 23, 2025

    ಮೈಸೂರು: ಭ್ರೂಣಹತ್ಯೆ ಜಾಲ ಪತ್ತೆ : 7 ಮಂದಿಯ ವಿರುದ್ಧ ಪ್ರಕರಣ ದಾಖಲು

    October 23, 2025

    ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ: ಈ ಬಾರಿ ದಾಖಲೆ

    October 23, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.