ಕೊರಟಗೆರೆ: ಜಿ.ಕೆ.ವಿ.ಕೆ. ಕೃಷಿ ಮೇಳದಲ್ಲಿ ತಾಲೂಕಿನ ‘ಉತ್ತಮ ಯುವ ಪ್ರಗತಿ ಪರ ಕೃಷಿಕ’ ಪ್ರಶಸ್ತಿಯನ್ನು ಯುವ ಕೃಷಿಕ ದಾಸಾಲಕುಂಟೆಯ ಅಭಿಷೇಕ್ ಅವರಿಗೆ ನೀಡಿ ಗೌರವಿಸಲಾಗಿದೆ.
ಅಭಿಷೇಕ್ ಅವರು ಬಿಸಿಎ ವಿದ್ಯಾಭ್ಯಾಸ ಮುಗಿಸಿದ್ದಾರೆ. ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿ ಬೆಳೆಗಳಾದ ತೊಗರಿ, ಅಗಸೆ, ಮೆಕ್ಕೆ ಜೋಳ ಹಾಗೂ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಬಾಳೆ, ತರಕಾರಿ ಸೊಪ್ಪುಗಳನ್ನು ಬೆಳೆದು ಅಧಿಕ ಆದಾಯ ಪಡೆಯುತ್ತಿದ್ದಾರೆ.
ಕೃಷಿ ಚಟುವಟಿಕೆಗೆ ಪೂರಕವಾಗಿ ಹೈನುಗಾರಿಕೆಯಲ್ಲಿ ತೊಡಗಿ, ಹಸು ಹಾಗೂ ನಾಟಿ ಕೋಳಿ ಸಾಕಣಿಕೆ ಮಾಡಿ ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ. ಜೊತೆಗೆ ವಿವಿಧ ರೀತಿಯ ಅರಣ್ಯ ಕೃಷಿಯನ್ನು ಕೂಡ ಬೆಳೆದಿರುತ್ತಾರೆ.
ಅಭಿಷೇಕ್ ರವರನ್ನು ಗುರುತಿಸಿದ ತಾಲ್ಲೂಕು ಕೃಷಿ ಇಲಾಖೆ, ಕೃಷಿ ವಿಜ್ಙಾನ ಕೇಂದ್ರವು ಇಂದು ನಡೆದ ಜಿ.ಕೆ.ವಿ.ಕೆ.ಕೃಷಿ ಮೇಳದಲ್ಲಿ “ಉತ್ತಮ ಯುವ ಪ್ರಗತಿ ಪರ ಕೃಷಿಕ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700