ತಿಪಟೂರು: ತಾಲ್ಲೂಕು ಆಡಳಿತದ ವತಿಯಿಂದ 12ನೇ ಶತಮಾನದ ಬಸವಾದಿ ಶಿವಶರಣರಲ್ಲಿ ಅಗ್ರಗಣ್ಯರಾದ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಗ್ರೇಡ್ 2 ತಹಸೀಲ್ದಾರ್ ಜಗನ್ನಾಥರವರು ಉದ್ಘಾಟಿಸಿದರು.
ಮಾಚಿದೇವರು ಸಾಕ್ಷಾತ್ ವೀರಭದ್ರನ ಅಪರಾವತಾರ ನೇರ ನಿಸ್ಟೂರ ನಡೆ ನುಡಿ ಕಾಯಕ ಸಂಪನ್ನರಾಗಿದ್ದ ಮಾಚಿದೇವರು ವಚನ ಸಾಹಿತ್ಯ ರಕ್ಷಣೆಯಲ್ಲಿ ಇತಿಹಾಸ ಸೃಷ್ಟಿಸಿದ ಮಹಾನ್ ಚೇತನ ಎಂದು ತಾಲ್ಲೂಕು ಮಡಿವಾಳ ಸಂಘದ ಅದ್ಯಕ್ಷರಾದ ಆರ್.ನಿಜಲಿಂಗಪ್ಪನವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ನುಡಿನಮನ ಸಲ್ಲಿಸಿದರು.
ಮಡಿವಾಳ ಮಾಚಯ್ಯ ಪುರಾಣ ಪ್ರಸಿದ್ಧಿ ಒಮ್ಮೆದಕ್ಷ ಬ್ರಹ್ಮನು ಶಿವನನ್ನು ಹೊರತುಪಡಿಸಿ ಎಲ್ಲಾ ಮಹಾಗಣಂಗಳ ಆಹ್ವಾನಿಸಿ ಮಹಾರುದ್ರಯಾಗ ಮಾಡುತ್ತಿರುತ್ತಾನೆ. ಶಿವನ ಪತ್ನಿ ದಾಕ್ಷಾಯಿಣಿ ತನ್ನ ತಂದೆಯಾದ ದಕ್ಷಬ್ರಹ್ಮ ಕರೆಯದಿದ್ದರೂ, ಯಾಗಕ್ಕೆಶಿವನ ಮಾತು ಮೀರಿ ಹೊಗುತ್ತಾಳೆ. ಅವಮಾನ ತಾಳಲಾರದೆ ಯಜ್ಞಕುಂಡಕ್ಕೆ ಬಿದ್ದು ಆಹುತಿಯಾತ್ತಾಳೆ. ಇದರಿಂದ ಕುಪಿತಗೊಂಡ ಶಿವನ ಆದೇಶದಂತೆ ವೀರಭದ್ರ ದಕ್ಷನ ಸಂಹಾರ ಮಾಡುತ್ತಾನೆ. ದಕ್ಷನ ಸಂಹರಿಸಿ ವಿಜಯ ಸಂತಸದಲಿ ವೀರಭದ್ರ ಶಿವನ ಒಡ್ಡೋಲಗಕೆ ಆಗಮಿಸುವಾಗ ರಕ್ತಸಿಕ್ತ ಖಡ್ಗದ ಅಲಗು ಶಿವಶರಣ ವಸ್ತ್ರಗಳಿಗೆ ತಾಕಿ ಮಲಿನಗೊಳ್ಳುತ್ತದೆ. ಶಿವ ನೀನು ಭೂಲೊಕದಲ್ಲಿ ಜನಿಸಿ ಶಿವಶರಣರ ಲಿಂಗವಸ್ತ್ರಗಳನ್ನು ಮಡಿ ಮಾಡಿ ಪಾಪ ಪರಿಹರಿಸಿಕೊ ಎಂದು ಶಾಪಕೊಡುತ್ತಾನೆ. ಶಾಪಗ್ರಸ್ತನಾದ ವೀರಭದ್ರ ಈಗಿನ ಸಿಂದನೂರು ತಾಲ್ಲೂಕು ದೇವರ ಹಿಪ್ಪರಗಿಯ ಪರ್ವತಯ್ಯ ಸುಜ್ಞಾನಾಂಬೆ ಪುತ್ರರಾಗಿ ಜನಿಸಿ ಮಲ್ಲಿಕಾರ್ಜುನ ಗುರುಗಳ ಮಾರ್ಗದರ್ಶನದಲ್ಲಿ ಸಕಲ ವಿದ್ಯಾ ಪ್ರವೀಣನಾಗಿ, ಗೃಹಸ್ಥನಾಗಿ ಪತ್ನಿ ಮಲ್ಲಿಗಮ್ಮನೊಡಗೂಡಿ ಕಲ್ಯಾ ಣ ಸಮತಾ ಕ್ರಾಂತಿಯ ಮಹಾದಂಡನಾಯಕನಾಗಿ ಮುನ್ನುರು ಮುವತ್ತು ಕೋಟಿ ವಚನಗಳ ರಚನಾಕಾರನಾಗಿ ಬಸವಾದಿ ಶಿವಶರಣರ ವಚನಗಳ ಸಂರಕ್ಷರಾಗಿ ಇತಿಹಾಸ ಮೆರೆದಿದ್ದಾರೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೈತಕವಿ ಪಿ. ಶಂಕರಪ್ಪಬಳ್ಳೇಕಟ್ಟೆರವರು ಪ್ರವಚನ ನೀಡಿದರು.
ಸಮಾರಂಭದಲ್ಲಿ ತಾಲ್ಲೂಕು ಕಛೇರಿ ಸಿಬ್ಬಂದಿ ವರ್ಗ ತಾಲ್ಲುಕು ಸಂಘದ ಉಪಾಧ್ಯಕ್ಷರಾದ ನರಸಿಂಹಮೂರ್ತಿ, ಪದಾಧಿಕಾರಿಗಳಾದ ಪುಟ್ಟರಂಗಪ್ಪ.ಶಂಕರಲಿಂಗಪ್ಪ, ನಿಂಗಪ್ಪ, ಗೀರೀಶ್, ಕಾಳಪ್ಪ, ಲೋಕೇಶ್ ಕೇಶವಮೂರ್ತಿ, ಮಂಜುನಾಥ್ ಸುಬ್ಬಣ್ಣ ರಂಗಸ್ವಾಮಿ, ಮೋಹನ್, ವಿಜಿಯಮ್ಮ, ಮಹಿಳಾ ಅಧ್ಯಕ್ಷೆ ಭವ್ಯ, ಗಾಯತ್ರಿಪರಮೇಶ್, ಪ್ರೇಮ, ಹೇಮ, ಮಹಾಲಕ್ಷ್ಮಿ, ನೀಲಮ್ಮ ಮಾದಿಹಳ್ಳಿ ಸ್ತ್ರೀಶಕ್ತಿಸಂಘದ ಸದಸ್ಯರು ಹಾಗೂ ಸಮಾಜದ ಬಂಧುಗಳು ಭಾಗವಹಿಸಿ ಜಯಂತ್ಯೋತ್ಸವವನ್ನು ಯಶಸ್ವಿಗೊಳಿಸಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB