ದೆಹಲಿ: ವಾಹನದ ದಾಖಲೆ ತೋರಿಸು ಎಂದು ಕೇಳಿದ್ದಕ್ಕೆ ಕೋಪಗೊಂಡ ವಾಹನ ಸವಾರ ಟ್ರಾಫಿಕ್ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಮೇಲೆಯೇ ಹಲ್ಲೆ ನಡೆಸಿದ ಘಟನೆಯು ರೋಹಿಣಿ ಎಂಬಲ್ಲಿ ನಡೆದಿದೆ.
ಪಿಯೂಷ್ ಎಂಬಾತನ ವಾಹನವನ್ನು ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸ್ ವಾಹನದ ದಾಖಲೆಯನ್ನು ತೋರಿಸುವಂತೆ ಕೇಳಿದ್ದಾರೆ. ಆದರೆ ಆರೋಪಿಯು ವಾಹನದ ದಾಖಲೆಯನ್ನು ತೋರಿಸಲು ನಿರಾಕರಿಸಿದ್ದು ಮಾತ್ರವಲ್ಲದೇ, ಟ್ರಾಫಿಕ್ ಪೊಲೀಸ್ ಜೊತೆ ವಾದಕ್ಕೆ ಇಳಿದಿದ್ದಾನೆ.
ವಾದ ತಾರಕಕ್ಕೆ ಏರುತ್ತಿದ್ದಂತೆಯೇ ಆರೋಪಿ ಪಿಯೂಷ್ ಎಎಸ್ಐಯ ಕೆನ್ನೆಗೆ ಬಾರಿಸಿ, ಅವರ ಬೆರಳನ್ನು ಕಚ್ಚಿದ್ದಾನೆ ಎಂದು ತಿಳಿದು ಬಂದಿದೆ. ಬುಧವಾರ ಈ ಘಟನೆ ಸಂಭವಿಸಿದ್ದು 30 ವರ್ಷದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700