ತುರುವೇಕೆರೆಯ ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ತುರುವೇಕೆರೆಯ ನಟರಾಜ್ ರವರು ಆಯ್ಕೆಯಾಗಿದ್ದು, ಅವರನ್ನು ಪಟ್ಟಣದ A.V.S. S. ಕಚೇರಿಯಲ್ಲಿ ತುರುವೇಕೆರೆ ಛಲವಾದಿ ಮಹಾ ಸಭಾದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ನಟರಾಜ್, ನನ್ನ ವೃತ್ತಿಯಲ್ಲಿ ಈಗ ಹೆಚ್ಚಿನ ಜವಾಬ್ದಾರಿ ನನ್ನ ಹೆಗಲಿಗಿದೆ. ನ್ಯಾಯಯುತವಾದ ಕೇಸುಗಳನ್ನು ತೆಗೆದುಕೊಂಡು ವಾದ ಮಾಡುತ್ತೇನೆ. ಬಡವರ ಹಾಗೂ ಅಶಕ್ತರಿಗೆ ನನ್ನ ಕೈಲಾದ ಸೇವೆ ಮಾಡುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಡೊಂಕಿಹಳ್ಳಿ ರಾಮಯ್ಯ, ಉಪಾಧ್ಯಕ್ಷರಾದ ಬೀಚನಹಳ್ಳಿ ಮಹಾದೇವಯ್ಯ, ಡಿ.ಎಸ್.ಎಸ್.ತಾಲೂಕು ಸಂಚಾಲಕ ಕುಣಿಕೆನಹಳ್ಳಿ ಜಗದೀಶ್, ಪು ರಾಮಚಂದ್ರು, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾದ ಕೊಡಗಿಹಳ್ಳಿ ಹನುಮಂತಯ್ಯ, ಕಿರಣ್ ಕುಮಾರ್ ಮುಂತಾದ ಸಮಾಜದ ಬಾಂಧವರು ಹಾಜರಿದ್ದು ಅಭಿನಂದಿಸಿದರು.
ವರದಿ: ಸುರೇಶ್ ಬಾಬು. ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy