ತಿಪಟೂರು: ದೇಹದ ಸದೃಢತೆ, ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಬೆಳಗ್ಗಿನ ಕೆಲ ಗಂಟೆಗಳಲ್ಲಿ ಬಿಡುವು ಮಾಡಿಕೊಂಡು ಕ್ರೀಡೆಯಲ್ಲಿ ತೊಡಗುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಎಂದು ನ್ಯಾಯಾಧೀಶ ಬಿ.ಶಿವಕುಮಾರ್ ಹೇಳಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಮಂಗಳವಾರ ವಕೀಲರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿತ್ಯ ಒಂದಿಲ್ಲೊಂದು ಜಂಜಾಟದಲ್ಲಿ ತೊಡಗಿಕೊಂಡಿರುವ ಮನುಷ್ಯನಿಗೆ ಕೆಲಕಾಲ ದೇಹದ ಆರೋಗ್ಯಕ್ಕೂ ಆದ್ಯತೆ ನೀಡಬೇಕಿದೆ. ಕ್ರೀಡೆ ಎಂದರೆ ಸೋಲು- ಗೆಲುವು ಇದ್ದೇ ಇರುತ್ತದೆ. ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಅವರು ಇದೇ ವೇಳೆ ಸಲಹೆ ನೀಡಿದರು.
ನ್ಯಾಯಾಧೀಶರಾದ ನೂರುನ್ನಿಸ್ಸಾ, ಎಸ್.ಚಂದನ್, ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ದಯಾನಂದ್, ಉಪಾಧ್ಯಕ್ಷ ಸುರಬಿಧೇನು, ಕಾರ್ಯದರ್ಶಿ ಬಿ.ಎನ್.ಅಜಯ್ ಮೊದಲಾದವರು ಈ ಸಂದರ್ಭ ಇದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700