ತಿಪಟೂರು: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮೀಸಲಾತಿ ಹೆಚ್ಚಳ ಮಾಡಬೇಕು ಸಂವಿಧಾನ ಬದ್ದವಾಗಿ ದೊರೆಯಬೇಕಾದ ಮೀಸಲಾತಿಯನ್ನ ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ತಿಪಟೂರಿನಲ್ಲಿ ಮಹಶ್ರೀವಾಲ್ಮೀಕಿ ಸಂಘ ಹಾಗೂ ಮದಕರಿ ನಾಯಕ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ನಗರಸಭಾ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಿ.ಹೆಚ್.ರಸ್ತೆ ಮೂಲಕ ಸಾಗಿ ತಿಪಟೂರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು
ಪತ್ರಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮದಕರಿ ನಾಯಕ ಸಂಘದ ಅಧ್ಯಕ್ಷ ಮಹೇಶ್, ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮುದಾಯ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಾಮಾಜಿಕವಾಗಿ ಹಿಂದುಳಿದಿದ್ದು ಪರಿಶಿಷ್ಠ ಪಂಗಡಗಳಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ವಾಲ್ಮೀಕಿನಾಯಕ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ 3% ಮೀಸಲಾತಿಯನ್ನು 7.5%ಕ್ಕೆ ಹೆಚ್ಚಳ ಮಾಡಬೇಕು ಹಾಗೂ ಪರಿಶಿಷ್ಟ ಜಾತಿ ಮೀಸಲಾಯಿಯನ್ನ ಶೇಕಡ 15ರಿಂದ 17ಕ್ಕೆ ಹೆಚ್ಚಿಸಬೇಕು ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಯಥವತ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮೀಸಲು ಹಣ ಕಾಯ್ದೆ 2017 ಕಲಂ 7ಡಿ ಯನ್ನು ಕೂಡಲೇ ರದ್ದುಗೊಳಿಸಬೇಕು. ಪರಿಶಿಷ್ಠ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ವಾಲ್ಮಿಕಿ ಗುರುಪೀಠದ ಪೂಜ್ಯರಾದ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ಅನಿರ್ಥಿಷ್ಟಾವಧಿ ಮುಷ್ಕರ ಆರಂಭಿಸಿದ್ದು ಸರ್ಕಾರ ಆರಂಭದಲ್ಲಿ ಬೇಷರತ್ ಆಗಿ ಮೀಸಲಾಯಿ ಹೆಚ್ಚಿಸುವ ಭರವಸೆ ನೀಡಿತ್ತು ಆದರೆ ಕೊಟ್ಟ ಮಾತನ್ನು ತಪ್ಪುವ ಮೂಲಕ ವಚನ ಭ್ರಷ್ಠವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ನಾಯಕ ಸಮುದಾಯದ ಶಕ್ತಿಯನ್ನ ಲಘುವಾಗಿ ಪರಿಗಣಿಸಿದರೆ ದಂಗೆಳುವ ಸಂದರ್ಭ ಬರುತ್ತದೆ. ಯಾವುದೇ ಕಾರಣಕ್ಕೂ ನಮ್ಮ ಸಮುದಾಯಕ್ಕೆ ಅನ್ಯಾಯವಾದರೇ ಯಾವ ತ್ಯಾಗಕ್ಕೂ ಇಂಜರಿಯುವುದ್ದಿಲ್ಲ. ಸರ್ಕಾರ ಕೂಡಲೇ ಕೊಟ್ಟ ಮಾತಿನಂತೆ ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು
ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಜಯಸಿಂಹ ಮಾತನಾಡಿ, ನಾಯಕ ಸಮುದಾಯ ಸ್ವಾಮಿ ನಿಷ್ಟೆ ಹೆಸರಾದ ಸಮುದಾಯವಾಗಿದ್ದು, ತಲತಲಾಂತರದಿಂದ ದೇಶಸೇವೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದರು. ಒಂದು ಕಾಲದಲ್ಲಿ ಆಳುವ ಸಮುದಾಯವಾಗಿದ್ದ ವಾಲ್ಮೀಕಿ ನಾಯಕ ಸಮುದಾಯ. ಇಂದು ಸಾಮಾಜಿಕ ಆರ್ಥಿಕ ರಾಜಕೀಯವಾಗಿ ತೀರಾ ಹಿಂದುಳಿದಿದ್ದು, ಅನೇಕ ಜ್ವಲಂತ ಸಮಸ್ಯೆಗಳನ್ನ ಎದುರಿಸುತ್ತಿದೆ. ಕೇಂದ್ರ ಸರ್ಕಾರ ಶೇಕಡ 7.5ರಷ್ಟು ಮೀಸಲಾತಿ ಹೆಚ್ಚಳ ಮಾಡದೆ ಮೀನಾಮೇಷ ಎಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಪರಿಶಿಷ್ಠ ಪಂಗಡದ ಮೀಸಲಾತಿ ಹೆಚ್ವಿಸುವುದಾಗಿ ಮಾತುಕೊಟ್ಟು ಮಾತು ಮರೆತಿದೆ ಸರ್ಕರ ಕೊಟ್ಟಮಾತಿನಂತೆ ಮೀಸಲಾತಿ ಹೆಚ್ಚಿಸಬೇಕು ಸರ್ಕಾರ ಮೀಸಲಾತಿ ಹೆಚ್ಚಿಸದಿದ್ದರೇ ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ದಲಿತ ಮುಖಂಡ ಕೊಪ್ಪಶಾಂತಪ್ಪ ಮಾತನಾಡಿ, ರಾಜ್ಯ ಪರಿಶಿಷ್ಟ ಜಾತಿ ವರ್ಗಗಳನ್ನ ನಿರ್ಲಕ್ಷ್ಯ ಮಾಡಿವೇ ಪರಿಶಿಷ್ಟ ಜಾತಿಗೆ ಶೇಖಡ17.5 ಹಾಗೂ ಪರಿಶಿಷ್ಠ ವರ್ಗಕ್ಕೆ 7.5 ಮೀಸಲಾತಿ ಮೀಸಲಾತಿ ನೀಡಬೇಕು. ಸರ್ಕಾರ ಪರಿಶಿಷ್ಟರಿಗೆ ನೀಡುವ ಅನುದಾನವನ್ನು ಕಡಿತಗೊಳಿಸುವ ಮೂಲಕ ಅನ್ಯಾಯವೆಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವಾಲ್ಮೀಕಿ ನಾಯಕ ಸಂಘದ ಉಪಾಧ್ಯಕ್ಷ ನಾಗರಾಜು, ಪ್ರಧಾನಕಾರ್ಯದರ್ಶಿ ಮಂಜುನಾಥ್, ನಾರಾಯಣಪ್ಪ, ಸುಧಾಕರ್ ಗೋವಿಂದಪ್ಪ, ನಾಗಣ್ಣ ಮದಕರಿ ನಾಯಕ ಸಂಘದ ಉಪಾಧ್ಯಕ್ಷ ಲಿಂಗರಾಜು, ಮಂಜುನಾಥ್, ಗೌರಾವಧ್ಯಕ್ಷ ಸಿದ್ದಯ್ಯ, ಪರುಶುರಾಮ್ ನಾಯಕ್, ಪ್ರಧಾನಕಾರ್ಯದರ್ಶಿ ಮಹಲಿಂಗಯ್ಯ, ಸಿದ್ದೇಶ್ ಖಜಾಂಚಿ, ಕೃಷ್ಣಮೂರ್ತಿ, ವಿನಯ್, ಶ್ರೀನಿವಾಸ್ , ರಾಜುಮದಕರಿ, ಸೀತಾನಾಯಕ್ ಮುಂತಾದವರು ಉಪಸ್ಥಿತರಿದರು.
ವರದಿ: ಆನಂದ, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB