ರಾಜಸ್ಥಾನದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಹಳಿ ತಪ್ಪಿಸಲು ಯತ್ನ. ಸಿಬ್ಬಂದಿಯ ಮಧ್ಯಪ್ರವೇಶದಿಂದ ಭಾರೀ ಅನಾಹುತ ತಪ್ಪಿದೆ. ಟ್ರ್ಯಾಕ್ ಮೇಲೆ ದೊಡ್ಡ ಕಲ್ಲುಗಳು ಮತ್ತು ತಂತಿಯ ತುಂಡುಗಳು ಕಂಡು ಬಂದಿವೆ. ಭಿಲ್ವಾರಾ ಬಳಿ ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್ ಪ್ರೆಸ್ ವಿರುದ್ಧ ವಿಧ್ವಂಸಕ ಯತ್ನ ನಡೆದಿದೆ.
ಪ್ರಾಥಮಿಕ ತನಿಖೆಯ ನಂತರ, ನಡೆದಿರುವುದು ವಿಧ್ವಂಸಕ ಯತ್ನ ಎಂದು ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಬಂಡೆಗಲ್ಲುಗಳ ಜೊತೆಗೆ ಬೋಲ್ಟ್ ಮತ್ತು ತಂತಿಗಳನ್ನು ಟ್ರ್ಯಾಕ್ ನಲ್ಲಿ ಹುದುಗಿಸಿ ಅದನ್ನು ಚಲಿಸದಂತೆ ಮಾಡಲಾಗಿತ್ತು. ಇದೆಲ್ಲವೂ ರೈಲನ್ನು ಹಳಿತಪ್ಪಿಸುವ ಪ್ರಯತ್ನ ಎಂದು ಅಧಿಕಾರಿಗಳು ವಿವರಿಸುತ್ತಾರೆ. ಲೊಕೊ ಪೈಲಟ್ ಗಳ ಗಮನಕ್ಕೆ ತಂದಾಗ ಭಾರಿ ಅನಾಹುತ ತಪ್ಪಿದೆ.


