ದೇಶದಾದ್ಯಂತ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿದೆ. ೧೯ ಕೆಜಿ ವಾಣಿಜ್ಯ ಎಲ್‌ಪಿಜಿ ಪ್ರತಿ ಸಿಲಿಂಡರ್‌ಗೆ ೧೩೫ ರೂ.ಗಳಷ್ಟು ಕಡಿಮೆಯಾಗಿದೆ.ಹಣದುಬ್ಬರಕ್ಕೆ ಕಡಿವಾಣ ಹಾಕಲು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರ ಕಡಿತಗೊಳಿಸಲಾಗಿದೆ. ಹೊಸ ದರ ಇಂದಿನಿಂದ ದೇಶಾದ್ಯಂತ ಅನ್ವಯವಾಗಲಿದೆ. ಆದರೆ ಗೃಹಬಳಕೆಯೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಇತ್ತೀಚೆಗೆ ಪೆಟ್ರೋಲ್, ಡಿಸೇಲ್‌ದರ ಇಳಿಕೆಯಾದ ಬೆನ್ನಲೇ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿರುವುದು ಹೊಟೇಲ್ ಉದ್ದಿಮೆದಾರರಿಗೆ ತುಸು ನೆಮ್ಮದಿ ತಂದಿದೆ. ಗ್ರಾಹಕರು ತುಸು ನಿರಾಳರಾಗಿದ್ದಾರೆ.ಈ ಹಿಂದೆ ನಿಗದಿ ಮಾಡಿರುವ ಬೆಲೆಗೆ ಗೃಹಬಳಕೆ ಸಿಲಿಂಡರ್‌ದೊರೆಯಲಿದೆ. ಅದರಂತೆ ಬೆಂಗಳೂರಿನಲ್ಲಿ ಗೃಹಬಳಕೆಯ ೧೪.೨ ಕೆ.ಜಿ. ತೂಕದ ಸಿಲಿಂಡರ್ ದರ ೧,೦೦೬ ರಷ್ಟಿದೆ. ಕಳೆದ ತಿಂಗಳು ಮೇ ೧ರಂದು ೧೯ ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ೧೦೨.೫೦ ರೂ ಏರಿಕೆಯಾಗಿತ್ತು.
ಇದಕ್ಕೂ ಮುನ್ನ ಏಪ್ರಿಲ್ ೧ ರಂದು ಎಲ್‌ಪಿಜಿ ಸಿಲಿಂಡರ್‌ಗೆ ೨೫೦ ರೂ. ಮಾರ್ಚ್೧ ರಂದು ೧೦೫ ರೂ.ಗಳಷ್ಟು ಹೆಚ್ಚಿಸಲಾಗಿತ್ತು.ಕಳೆದ ತಿಂಗಳಷ್ಟೇ, ಏರುತ್ತಿರುವ ಹಣದುಬ್ಬರದ ಮಧ್ಯೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲಿನ ಕೇಂದ್ರೀಯ ಅಬಕಾರಿ ಸುಂಕದಲ್ಲಿ ಸರ್ಕಾರವು ಕಡಿತವನ್ನು ಘೋಷಿಸಿತ್ತು. ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ೮ ರೂಪಾಯಿ ಕಡಿತಗೊಳಿಸಿದರೆ, ಡೀಸೆಲ್‌ಗೆ ೬ ರೂಪಾಯಿ ಕಡಿತಗೊಳಿಸಲಾಗಿತ್ತು.
ವಿವಿಧ ನಗರಗಳಲ್ಲಿ ದರ
ದೆಹಲಿ- ೨,೨೧೯ ರೂ.,
ಬೆಂಗಳೂರು- ೨,೩೦೦ರೂ.,
ಕೋಲ್ಕತ್ತಾ- ೨,೩೨೨ ರೂ.,
ಮುಂಬೈ- ೨,೧೭೧.೫೦ ರೂ.,,
ಚೆನ್ನೈ- ೨,೩೭೩ ರೂ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


