ನವದೆಹಲಿ: ವಾಣಿಜ್ಯ ಸಿಲಿಂಡರ್ ಗಳ ಎಲ್ ಪಿಜಿ ಬೆಲೆ ಬುಧವಾರ 103.50 ರೂ.ಗಳಷ್ಟು ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ ಈ ಬೆಲೆ ಜಾರಿಗೆ ಬರಲಿದೆ. ಈ ಮೂಲಕ ಎಲ್ ಪಿಜಿ ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ದೆಹಲಿಯಲ್ಲಿ 19 ಕೆ.ಜಿ. ವಾಣಿಜ್ಯ ಸಿಲಿಂಡರ್ ಬೆಲೆ ಇಂದಿನಿಂದ 2,104 ಆಗಲಿದ್ದು, ಈ ಹಿಂದೆ ಇದು 2,000.50 ರೂ. ಇತ್ತು. ಕೋಲ್ಕತ್ತಾದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 101 ರೂ.ಗೆ ಏರಿಕೆಯಾಗಿದ್ದು, ಈ ಮೂಲಕ ಗ್ಯಾಸ್ ಬೆಲೆ 2,174.5 ರೂ.ಗೆ ತಲುಪಿದೆ. ಇಲ್ಲಿ ಈ ಹಿಂದೆ ಗ್ಯಾಸ್ ಬೆಲೆ 2073.5 ರೂ. ಇತ್ತು. ಮುಂಬೈನಲ್ಇ 1,950 ರೂ. ಇದ್ದ ಗ್ಯಾಸ್ ಬೆಲೆ ಇದೀಗ 2,051 ರೂ. ಗೆ ಏರಿಕೆಯಾಗಿದೆ. ಇಲ್ಲಿ 101 ರೂಪಾಯಿ ಏರಿಕೆ ಮಾಡಲಾಗಿದೆ.
ಇನ್ನೂ ಚೆನ್ನೈನಲ್ಲಿ 19 ಕೆ.ಜಿ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,234.50 ರೂ.ಗೆ ಏರಿಕೆಯಾಗಿದೆ. ಈ ಹಿಂದೆ ಚೆನ್ನೈನಲ್ಲಿ ಗ್ಯಾಸ್ ಬೆಲೆ 2,133 ರೂ. ಆಗಿತ್ತು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700