ಮಂಗಳೂರು: ಉರಾಳಾಸ್ ವೆರಿಕೋಸ್ ವೇನ್ಸ್(Varicose Veins) ಆಯುರ್ವೇದ ಮಂಗಳೂರು ವತಿಯಿಂದ, ಖ್ಯಾತ ವೆರಿಕೋಸ್ ವೇನ್ಸ್ ವೈದ್ಯರಾದ ಡಾ.ಎಂ.ವಿ.ಉರಾಳ,ರವರ ನಿರ್ದೇಶನದಲ್ಲಿ ಮಂಗಳೂರು ನಗರದ ಪೊಲೀಸರಿಗೆ ಒಂದು ದಿನದ ಅರಿವು ಕಾರ್ಯಕ್ರಮ ಮತ್ತು ಉಚಿತ ವೆರಿಕೋಸ್ ವೇನ್ಸ್ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಶಿಬಿರವನ್ನು ಕುರಿತು ಮಂಗಳೂರು ಡಿಸಿಪಿಗಳಾದ ಹರಿರಾಂ ಶಂಕರ್ ಹಾಗೂ ದಿನೇಶ್ ಕುಮಾರ್ ಮಾತನಾಡಿ, ವೆರಿಕೋಸ್ ವೇನ್ಸ್ ಸಮಸ್ಯೆಯಿಂದ ರಾಜ್ಯದ ಹಲವಾರು ಪೊಲೀಸ್ ಸಿಬ್ಬಂದಿ ಕೂಡ ಬಳಲುತ್ತಿದ್ದಾರೆ ಎಂದು ತಿಳಿಸಿದರು.
ಖ್ಯಾತ ತಜ್ಞ ವೈದ್ಯರಾದ ಡಾ.ಎಂ.ವಿ.ಉರಾಳ ಮಾತನಾಡಿ, ನಮ್ಮ ವೆರಿಕೋಸ್ ವೇನ್ಸ್ ಆಯುರ್ವೇದ ಔಷಧಿ ಅತ್ಯಂತ ಪರಿಣಾಮಕಾರಿಯಾಗಿದ್ದು, ಸಾವಿರಾರು ಮಂದಿ ಔಷಧೀಯ ಸದುಪಯೋಗ ಪಡೆದುಕೊಂಡು ಆಪರೇಷನ್ ರಹಿತ ಗುಣಮುಖವಾಗಿದ್ದಾರೆ. ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಉರಾಳಾಸ್ ವೆರಿಕೋಸ್ ವೇನ್ಸ್ ಆಯುರ್ವೇದ ಚಿಕಿತ್ಸೆ ಶಾಖೆಗಳು ತೆರೆದು, ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಬೆಂಗಳೂರು ಸಿಟಿ ಪೊಲೀಸ್ ಯೋಗಕ್ಷೇಮ ಅಧಿಕಾರಿ ಸುಶ್ಮಿತಾ, ಮಂಗಳೂರು ನಗರ ಪೊಲೀಸ್ ಸಹಾಯಕ ಆಯುಕ್ತ ನಟರಾಜ್ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ 60ಕ್ಕೂ ಹೆಚ್ಚು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.
ಇದೇ ವೇಳೆ ಖ್ಯಾತ ತಜ್ಞ ಡಾ.ಎಂ.ವಿ.ಉರಾಳ್ ರವರಿಗೆ ಪೊಲೀಸ್ ಸಿಬ್ಬಂದಿ ಧನ್ಯವಾದ ಅರ್ಪಿಸಿದರು.
ವರದಿ: ಸಚಿನ್ ಮಾಯಸಂದ್ರ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy