ಬಾಗಲಕೋಟೆ: ಮುಧೋಳ ನಗರದಲ್ಲಿ ಏರ್ಪಡಿಸಲಾಗಿದ್ದ ವಿಧಾನ್ ಪರಿಷತ್ ಸದಸ್ಯ, ಆರ್ ಬಿ ತಿಮ್ಮಾಪುರ ಜನ್ಮದಿನೋತ್ಸವ ಕಾರ್ಯಕ್ರಮದ ವೇದಿಕೆ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಗ್ಗರಿಸಿ ಬಿದ್ದಿದ್ದಾರೆ.
ಸಿದ್ದರಾಮಯ್ಯ ಆಸನದ ಮೇಲೆ ಕೂರೋದಕ್ಕೆ ಬರುವ ವೇಳೆ ಎಡವಿ ಮುಗ್ಗಿರಿಸಿ ಟಿಪಾಯ್ ಮೇಲೆ ಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸಿದ್ದರಾಮಯ್ಯ ಆಪ್ತರು ಮೇಲೆಬ್ಬಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ದಿವಂಗತ ಸಿದ್ದು ನ್ಯಾಮಗೌಡ ಪುತ್ಥಳಿ ಅನಾವರಣ ಹಾಗೂ ಮಾಜಿ ಸಚಿವ ತಿಮ್ಮಾಪುರ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಗೆ ಆಗಮಿಸಿದ್ದರು.
ಹೀಗಾಗಿ ಸಚಿವ ಮುರಗೇಶ್ ನಿರಾಣಿ, ಸಹೋದರ ಸಂಗಮೇಶ್ ನಿರಾಣಿ ಸಿದ್ದರಾಮಯ್ಯ ಅವರನ್ನು ಮನೆಗೆ ಆಹ್ವಾನಿಸಿದರು. ಮನೆಗೆ ತೆರಳಿ ಮನೆಯಲ್ಲಿ ಕಾಫೀ ಸೇವಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


