ಬೆಳಗಾವಿ: ವೇದಿಕೆ ಮೇಲೆ ಕುಳಿತು ಆಶೀರ್ವಚನ ನೀಡುತ್ತಿರುವಾಗಲೇ ಸ್ವಾಮೀಜಿಯೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದ್ದು, 53 ವರ್ಷ ವಯಸ್ಸಿನ ಸಂಗನಬಸವ ಮಹಾಸ್ವಾಮೀಜಿ ತಮ್ಮ ಹುಟ್ಟು ಹಬ್ಬದ ದಿನವೇ ಅಗಲಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ ಮಠದ ಸ್ವಾಮೀಯಾಗಿರುವ ಸಂಗನಬಸವ ಮಹಾಸ್ವಾಮೀಜಿ ತಮ್ಮ ಹುಟ್ಟು ಹಬ್ಬದ ವಿನವೇ ಪ್ರವಚನ ನೀಡುತ್ತಲೇ ಕುಳಿತ ಸ್ಥಳದಲ್ಲಿಯೇ ತಮ್ಮ ಆಸನಕ್ಕೆ ಒರಗಿ ಅಸುನೀಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಸ್ವಾಮೀಜಿಗಳು ವಿವಿಧ ವಿಚಾರಗಳ ಬಗ್ಗೆ ಸರಾಗವಾಗಿ ಮಾತನಾಡುತ್ತಲೇ ಇದ್ದರು, ಆದರೆ ಏಕಾಏಕಿ ಅವರು ತಾವು ಕುಳಿತಿದ್ದ ಆಸನಕ್ಕೆ ಒರಗಿ ಕುಸಿದಿದ್ದು, ಹೃದಯಾಘಾತಗೊಂಡು ಮೃತಪಟ್ಟಿದ್ದಾರೆ. ವೇದಿಕೆಯಲ್ಲಿದ್ದ ಇತರ ಗಣ್ಯರು ಕೆಲವೇ ಕ್ಷಣದಲ್ಲಿ ನಡೆದ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700