ತಿಪಟೂರು: ನಂಬಿಕೆಗಿಂತ ಮೊದಲದ್ದು ಯಾವುದು ಇಲ್ಲ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲವಾರು ಕಾರ್ಯಕ್ರಮ ನಡೆಯುತ್ತಿದ್ದು, ಪೂಜ್ಯ ವೀರೇಂದ್ರ ಹೆಗ್ಗಡೆಯವರು ಒಂದು ತಾಲೂಕಿಗೆ ಸೀಮಿತ ವಾಗದೇ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಸಂಘಟನೆ ಸ್ಥಾಪಿಸಿ, ಬಡವರ್ಗದ ಏಳಿಗೆಗಾಗಿ ಅವಿರತ ಶ್ರಮಿಸುತ್ತಿದ್ದಾರೆ. ಈ ನಿಸ್ವಾರ್ಥ ಸೇವೆಯನ್ನು ನಾನು 65 ವರ್ಷದಿಂದ ನಾನು ಕಣ್ಣಾರೆ ಕಂಡಿದ್ದೇನೆ ಎಂದು ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿಪಟೂರು ತಾಲೂಕು ಬಿದರೆಗುಡಿ ವಲಯದ ಮತ್ತಿಹಳ್ಳಿ ಗ್ರಾಮದಲ್ಲಿ ಈ ದಿನ ಶಿವ ಪಂಚಾಕ್ಷರಿ ಪಠಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಧರ್ಮಧಿಕಾರಿಯಾಗಿ ಯಾರ ಹಿತವನ್ನು ಕಸಿಯದೆ, ಇನ್ನೊಬ್ಬರ ಒಳಿತಿಗಾಗಿ ತಮ್ಮ ಸಂಸ್ಥೆಯನ್ನೆ ಮುಡಿಪಾಗಿ ಇಟ್ಟಿದ್ದಾರೆ ಎಂದರು.
ಈ ದಿನ ತಾವೆಲ್ಲರೂ ತಾಯಂದಿರು ಶಿವ ಪಂಚಾಕ್ಷರಿ ಪಠಣ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಿರುತ್ತಿರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಕಾಮಗಾರಿ ನಡೆಸಿ ಕೆರೆಗಳನ್ನು ಪುನಶ್ಚೇತನಗೊಳಿಸುತ್ತಿದ್ದು, ಪ್ರಸ್ತುತ ತಿಪಟೂರು ತಾಲೂಕಿನ ಮತ್ತಿಹಳ್ಳಿ ಕೆರೆ ಕಾಮಗಾರಿ ಪ್ರಾರಂಭಿಸಲು ಯೋಜನೆ ರೂಪಿಸಿದ್ದು, ಮುಂದಿನ ತಯಾರಿಗೆ ಸ್ವಾಮಿಯ ಕೃಪೆ ಇರಲಿ ಎಂದರು.
ಈ ಕಾರ್ಯಕ್ರಮದಲ್ಲಿ ಸೋಮಣ್ಣರವರಿಂದ ಕೊಡಿ ಚಿಕ್ಕಮ್ಮ ಮತ್ತು ಶ್ರೀ ಲಕ್ಷ್ಮಿ ಸ್ವ ಸಹಾಯ ಸಂಘಕ್ಕೆ 100000/-ಮೊತ್ತದoತೆ ಲಾಭಂಶ ವಿತರಣೆ ಮಾಡಿದರು. ಹಾಗೆಯೇ ಮಹಾದೇವಮ್ಮ ರವರಿಗೆ ಜನಮಂಗಳ ಕಾರ್ಯಕ್ರಮದ ವೀಲ್ ಚೇರ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬಿ.ಸಿ.ನಾಗೇಶ್ ಮಾಜಿ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ, ಸತೀಶ್ ಸುವರ್ಣ ಜಿಲ್ಲಾ ನಿರ್ದೇಶಕರು ಶ್ರೀಕ್ಷೇತ್ರ ಧ. ಗ್ರಾ. ಯೋ ಬಿ ಸಿ ಟ್ರಸ್ಟ್ (ರಿ )ತುಮಕೂರು1ಜಿಲ್ಲೆ, ಯೋಜನೆಯಕಾರ್ಯಕ್ರಮ ಹಾಗೂ ಪೂಜಾ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿದರು.
ಪವನ್ ಕುಮಾರ್ SKS ತಹಶೀಲ್ದಾರ್ ತಿಪಟೂರ್, ಉದಯ್ ಕೆ. ಯೋಜನಾಧಿಕಾರಿಗಳು, ಧಾರ್ಮಿಕ ಉಪನ್ಯಾಸ ಡಾ.ಸುಮನ TM, ಹಿರಿಯ ಆಯುಷ್ ವೈದ್ಯಾಧಿಕಾರಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಕೊನೆಹಳ್ಳಿ, ಶಿವರಾತ್ರಿ ಆಚರಣೆ ಮಾಡುವ ಕ್ರಮ, ಶಿವ ಪಂಚಾಕ್ಷರಿ ಪಠಣದ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಜ್ಯೋತಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಈ ಜೆ ಶಿವರಾಜ್ ಪಿ. ಡಿ.ಓ ಗ್ರಾ ಪ. ಮತ್ತಿಹಳ್ಳಿ, ಷಡಕ್ಷರಿ ಅರ್ಚಕರು ವಲಯದ ಮೇಲ್ವಿಚಾರಕರು, ಅನಿತಾ ಸೇವಾಪ್ರತಿನಿಧಿ VLe ಸ್ವ ಸಹಾಯ ಪ್ರಗತಿ ಬಂಧು ಸಂಘದ ಸದಸ್ಯರು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4