ಸರಗೂರು: ತಾಲೂಕು ಪಂಚಾಯಿತಿ ವ್ಯಾಪ್ತಿಯ ವಿಕಲಚೇತನರಿಗೆ ಕೇಂದ್ರ ಸರ್ಕಾರ ನೀಡುವ ವಿಶಿಷ್ಟ ಗುರುತಿನ ಚೀಟಿ UDID ಕಾರ್ಡ್ ಪಡೆಯಲು ಸರಗೂರು ತಾಲ್ಲೂಕು MRW ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಮನವಿ ಮಾಡಿದರು.
ಇಂದು ಸರಗೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಯಲ್ಲಿ UDID ಕಾರ್ಡ್ ಕ್ಯಾಂಪ್ ಇದ್ದು, ಇದರಲ್ಲಿ 138 ಜನಕ್ಕೊ ಹೆಚ್ಚು ವಿಕಲಚೇತನರ ಭಾಗವಹಿಸಿ, ವೈದ್ಯಕೀಯ ತಪಾಸಣೆ ಮಾಡಿಸಿಕೊಂಡರು. ಮಧ್ಯಾಹ್ನ ಸರಗೂರು ಪಟ್ಟಣ ಪಂಚಾಯಿತಿಯಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಶಿಬಿರವನ್ನುದ್ದೇಶಿಸಿ ಮಾತನಾಡಿದ ಹೆಚ್.ಡಿ.ಕೋಟೆ ತಾಲೂಕಿನ THO ರವಿಕುಮಾರ್, ಎಲ್ಲಾ ವಿಕಲಚೇತನ ರು UDID ಕಾರ್ಡ್ ಪಡೆದುಕೊಳ್ಳಿ ಎಂದು ತಿಳಿಸಿದರು.
ವೈದ್ಯಾಧಿಕಾರಿಗಳು ತಪಾಸಣೆ ಮಾಡಿದರು,ಸರಗೂರು ತಾಲೂಕು ಮಟ್ಟದ M.RW ಜವರಾಜು ಎಲ್ಲಾ ರೀತಿಯ ವ್ಯವಸ್ಥೆ ಮಾಡಿದರು. ಸರಗೂರು ತಾಲೂಕಿನ ಎಲ್ಲಾ ಗ್ರಾಮಿಣ ಪುನರ್ ವಸತಿ(V.R.W) ಕಾರ್ಯಕರ್ತರು ಹಾಗೂ ಸರಗೂರು ವೈದ್ಯಾಧಿಕಾರಿಗಳು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy