ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆ ಮಾಡಲು ಸಿದ್ದತೆ ನಡೆಸುತ್ತಿದೆ. ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು 75ನೇ ವರ್ಷದ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಹೊಸ ಮಾದರಿಯ 75 ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಸಿದ್ಧತೆ ಮಾಡಿಕೊಂಡಿದೆ.
ಸ್ವಿಚ್ ಮೊಬಿಲಿಟಿ ಲಿಮಿಟೆಡ್ ನಿಂದ 12ಮೀಟರ್ ಉದ್ದದ ನಾನ್ ಎಸಿ ಇ ಬಸ್ಸುಗಳು ಇವಾಗಿವೆ. ಎಲ್ಲಾ ಅಂದುಕೊಂಡಂತೆ ಆದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಬಸ್ಸುಗಳಿಗೆ ವಿಧಾನಸೌಧದ ಮುಂದೆ ಹಸಿರು ನಿಶಾನೆ ತೋರಲಿದ್ದಾರೆ.
ಬಿಎಂಟಿಸಿಯೂ ಕೇಂದ್ರ ಸರ್ಕಾರದ ಫೇಮ್ -2 ಯೋಜನೆಯಡಿ 300 ಇ ಬಸ್ ಗಳ ಖರೀದಿಗೆ ಟೆಂಡರ್ ಆಹ್ವಾನಿಸಿತ್ತು. ಕಿ. ಲೋ ಮೀಟರ್ ಗೆ 48.95ಯಂತೆ ಸ್ವಿಚ್ ಕಂಪನಿ ಟೆಂಡರ್ ಪಡೆದು ಗುತ್ತಿಗೆ ಆಧಾರದ ಮೇಲೆ 300 ಬಸ್ಸುಗಳನ್ನ ಬಿಎಂಟಿಸಿಗೆ ಒದಗಿಸಲಿದೆ. ಈ ಬಸ್ಸುಗಳಿಗೆ ಟೆಂಡರ್ ಪಡೆದ ಕಂಪನಿಯೇ ಚಾಲಕರನ್ನ ಒದಗಿಸಲಿದೆ, ನಿರ್ವಹಣೆ ಮತ್ತು ಚಾರ್ಜ್ ಮಾಡಲು ಬೇಕಾದ ಮೂಲ ಸೌಕರ್ಯವನ್ನು ಇದೆ ಸಂಸ್ಥೆ ಮಾಡಲಿದೆ ಎಂದು ತಿಳಿದುಬಂದಿದೆ.
ಈ ಹೊಸ ಬಸ್ಸುಗಳು 41 ಆಸನ ಹೊಂದಿರಲಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಸಂಚಾರ ಮಾಡಬಹುದು. ಮತ್ತೆ ಚಾರ್ಜ್ ಮಾಡಿದರೆ 75 ಕಿಲೋ ಮೀಟರ್ ಸೇರಿದಂತೆ ಒಟ್ಟು 225 ಕಿ.ಮೀ ಪ್ರಯಾಣ ಮಾಡಬಹುದಾಗಿದೆ. ಸಾಮಾನ್ಯ ಬಿಎಂಟಿಸಿ ಬಸ್ಸುಗಳಲ್ಲಿನ ದರವೇ ಈ ಬಸ್ಸುಗಳಲ್ಲಿ ಇರಲಿವೆ. ಪ್ರತಿಯೊಂದು ಪಾಸ್ ಗಳಿಗೂ ಈ ಬಸ್ ಗಳಲ್ಲಿ ಅನುಮತಿ ಇರಲಿದೆ. ಬಸ್ ಗಳ ಕಲರ್ ಕೂಡ ಪ್ರಯಾಣಿಕರನ್ನು ಆಕರ್ಷಿಸಲಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy