ಹಿರಿಯೂರು: ತಾಲ್ಲೂಕಿನ ಐಮಂಗಲ ಹೋಬಳಿಯ ಬುರುಜಿನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಯಡಿ ವಸತಿ ನೀಡಲು ಗ್ರಾಮ ಸಭೆ ನಡೆಸಲಾಗುತ್ತಿದೆ ಎಂದು ಶಾಸಕಿ ಕೆ .ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಬುರುಜನರೊಪ್ಪ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಬ್-ಕೀ ಯೋಜನೆ – ಸಬ್ ಕಾ ವಿಕಾಸ್ ಅಡಿಯಲ್ಲಿ ಜನಯೋಜನಾ ಅಭಿಯಾನ ಯೋಜನೆ ಹಾಗೂ 2021-22 ನೇ ನಮ್ಮ ಗ್ರಾಮ-ನಮ್ಮ ಯೋಜನೆಯ ವಾರ್ಡ್-ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಹಿರಿಯೂರು ತಾಲ್ಲೂಕಿನ ಶಾಸಕಿ ಪೂರ್ಣಿಮ ಶ್ರೀನಿವಾಸ್ ಅವರು ಮಾತನಾಡಿದರು.
ಅವಶ್ಯಕತೆ ಇರುವ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚುವರಿ ವಸತಿ ಮಂಜೂರು ಮಾಡುವಂತೆ ಸದಸ್ಯರು, ಮುಖಂಡರುಗಳು, ಗ್ರಾಮಸ್ಥರು ಶಾಸಕಿಗೆ ಮನವಿ ಮಾಡಿದರು.
ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಬೇರಪ್ಪ, ಉಪಾಧ್ಯಕ್ಷೆ ತಾಹೆರಾ ಬಾನು, ಜಿ.ಪಂ. ಮಾಜಿ ಸದಸ್ಯೆ ರಾಜೇಶ್ವರಿ, ಸುಮ, ಸಿದ್ದೇಶ್ವರಿ, ರಾಜಮ್ಮ, ಕವಿತ, ಸುರೇಶ್, ಲತಾ ಮುಖಂಡರಾದ ಮೈಲಾರಪ್ಪ, ಲಿಂಗಾರೆಡ್ಡಿ, ನವೀನ್, ಜಯಣ್ಣ ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು