ತುಮಕೂರು: ರಾಜ್ಯ ಸರ್ಕಾರದ ನಿರ್ಣಯದಲ್ಲಿ ಆರ್.ಎಸ್.ಎಸ್. ಪ್ರಭಾವವಿದೆ. ರಾಜ್ಯ ಸರ್ಕಾರ ಆರ್.ಎಸ್.ಎಸ್. ಮಾತು ಕೇಳಿ ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರ ವಿಚಾರಗಳನ್ನು ಸುಟ್ಟು ಹಾಕಲು ಪ್ರಯತ್ನಿಸುತಿತ್ತು. ಹಾಗಾಗಿ ನಾವು ಆರ್.ಎಸ್.ಎಸ್. ಚಡ್ಡಿ ಸುಟ್ಟಿದ್ದೇವೆ ಎಂದು ಬಿಡುಗಡೆಗೊಂಡ ಎನ್.ಎಸ್.ಯು.ಐ. ರಾಜ್ಯಾಧ್ಯಕ್ಷ ಕೀರ್ತಿಗಣೇಶ್ ಹೇಳಿಕೆ ನೀಡಿದರು.
ಅವರು ತುಮಕೂರು ಜಿಲ್ಲಾ ಕಾರಾಗೃಹದಿಂದ ಬಿಡುಗಡೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆದ ಗೊಂದಲಗಳ ಬಗ್ಗೆ ಹಾಗೂ ಮಹಾ ನಾಯಕರಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಶಿಕ್ಷಣ ಸಚಿವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದು ವಿನಾಕಾರಣ ತಮ್ಮನು ಬಂಧಿಸಲಾಗಿತ್ತು ಎಂದರು.
ರಾಜ್ಯ ಸರ್ಕಾರದ ಪ್ರತಿಯೊಂದು ನಡೆಯ ಹಿಂದೆಯೂ ಆರ್. ಎಸ್. ಎಸ್ ನ ಪಾತ್ರವಿದ್ದು, ಅದರ ವಿರುದ್ಧ ಪ್ರತಿಭಟಿಸಿದ್ದೆವು. ಈ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ಸದಾ ನಮ್ಮ ಜೊತೆ ಇದ್ದರು. ದೇಶಕೋಸ್ಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೋರಾಟ ಮಾಡಿ ಜೈಲಿಗೆ ಹೋಗಿರುವುದು ನಮ್ಮಲ್ಲಿ ಖುಷಿ ತಂದಿದೆ. ನಾಡಿಗಾಗಿ ಜೈಲಿಗೆ ಹೋಗಿದ್ದು ಹೆಮ್ಮೆ ಅನಿಸುತ್ತದೆ. ಪಠ್ಯ ಪುಸ್ತಕದ ಗೊಂದಲ ನಿವಾರಣೆಯಾಗುವ ವರೆಗೂ ಸಹ ತಮ್ಮ ಹೋರಾಟ ನಿರಂತರವಾಗಿ ನಡೆಯಲಿದ್ದು, ಮುಂದಿನ ಹೋರಾಟದ ರೂಪುರರೇಷೆ ಸದ್ಯದಲ್ಲೇ ರೂಪಿಸುತ್ತೇವೆಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹುಲಿಕುಂಟೆ ಮಠ ಹಾಗೂ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5