ತುರುವೇಕೆರೆ: ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆಲುವು ನನ್ನದೇ ಪುಟ್ಟಣ್ಣನವರ ಗೆಲುವಿನಿಂದ ಶಿಕ್ಷಕರೆಲ್ಲ ಸರ್ಕಾರದ ಪರವಾಗಿದ್ದಾರೆ ಸಾಬೀತಾಗಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೊಷ್ಟಿಯಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ತುಮಕೂರು ಜಿಲ್ಲೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಸಹಕಾರ ಕೊಟ್ಟಂತಹ ತಾಲ್ಲೂಕು ತುರುವೇಕೆರೆ ಆದ್ದರಿಂದ ಈ ತಾಲ್ಲೂಕಿನಮೇಲೆ ನನಗೆ ವಿಶೇಷ ಪ್ರೀತಿ ಈ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆಲುವು ನನ್ನದೇ ಪುಟ್ಟಣ್ಣನವರ ಗೆಲುವಿನಿಂದ ನಮಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದರು.
ಕಳೆದ ಬಾರಿ 18 ಸಾವಿರ ಮತಗಳನ್ನು ಗಳಿಸಿ ಎರಡನೆಯ ಸ್ಥಾನಪಡೆದಿದ್ದೆ ನಾನು ಶಿಕ್ಷಕ ಸ್ನೇಹಿಯಾಗಿ ಕೆಲಸಮಾಡಿದ್ದೇನೆ. ಶಿಕ್ಷಕರಲ್ಲಿ ಅವರದೇಆದ ಸಮಸ್ಯೆಗಳಿವೆ. ಅದರಲ್ಲಿ ಆರೋಗ್ಯ, ಶಿಕ್ಷಣ, ಕನಿಷ್ಟ ವೇತನ 2015ರಿಂದ ಶಿಕ್ಷಕರು ಅತಂತ್ರವಾಗಿದ್ದಾರೆ .ಜ್ಯೋತಿ ಸಂಜೀವಿನಿ 1,29ಲಕ್ಷ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಯಿಂದ ಸಹಾಯವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದ್ದರಿಂದ ಬರುವಂತಹ ಸಂಸತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ನಮ್ಮ ಪಕ್ಷ ಗಳಿಸಲಿದೆ ಎಂದರು.
ಈ ದಿವಸ ತಾಲ್ಲೂಕಿನ ಹಲವಾರು ಶಾಲೆಗಳಿಗೆ ಭೇಟಿಯನ್ನು ಕೊಟ್ಟಿದ್ದೇವೆ ಖಾಸಗಿ, ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ಅವರದೇ ಆದ ಸಮಸ್ಯೆಗಳು ಸಾಕಷ್ಟಿವೆ ಖಾಸಗಿ ಶಾಲೆಯಲ್ಲಿ ಕನಿಷ್ಠ ವೇತನಕ್ಕಾಗಿ ಸಹಾಯ ಮಾಡಿ ಎಂದು ಕೇಳಿದ್ದಾರೆ ಎಂದರು.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015ರಿಂದ ಇದುವರೆಗೂ ನೇಮಕಾತಿ ಮಾಡಿಕೊಂಡಿಲ್ಲ, ಶಿಕ್ಷಕರ ಕೊರತೆಯಿದೆ ಎನ್.ಪಿ.ಸಿ. ಯಲ್ಲಿ ಅನುದಾನಿತ ಶಿಕ್ಷಕರ ಭವಿಷ್ಯವನ್ನು ಅತಂತ್ರ ಮಾಡಿದ್ದಾರೆ. ಇವರಿಗೆ ಏನ್. ಪಿ. ಎಸ್ ಇಲ್ಲ ಓ.ಪಿ.ಎಸ್ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಹೊಸ ಪೆನ್ಶನ್ ಸ್ಕೀಮ್ನಲ್ಲಿ ನಿವೃತ್ತ ನೌಕರರಿಗೆ 800ರಿಂದ 2500ರೂ ವರೆಗೆ ಪಿಂಚಣಿ ಸಿಗಲಿದೆ
ಆದ್ದರಿಂದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಓ.ಪಿ.ಎಸ್ ಜಾರಿಗೆ ತರುತ್ತೇವೆ ಎಂದು ತಿಳಿಸಿದ್ದೆವು ಅದರಂತೆ ಕ್ರಮ ತೆಗೆದುಕೊಂಡಿದ್ದೇವೆ 7ನೇ ವೇತನ ಆಗೋಗದ ವರದಿ ಅನುಷ್ಠಾನ ಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಐ.ಟಿ.ಐ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಶೇಕಡಾ 90 ರಷ್ಟು ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ತಾಲೂಕಿನ ಮಾಯಸಂದ್ರ ಹೋಬಳಿಯ ಹಂಚಿಹಳ್ಳಿ ಪ್ರೌಢಶಾಲೆಗೆ ಭೇಟಿಕೊಟ್ಟಿದ್ದೆ ಕಟ್ಟಡ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ನಾವೆಲ್ಲ ಸರ್ಕಾರಿ ಶಾಲೆಯಲ್ಲಿ ಓದಿದಂತವರು ಇವುಗಳ ದುಸ್ಥಿತಿಯನ್ನು ನೋಡಿದರೆ ಮನಸ್ಸಿಗೆ ನೋವಾಗುವುದು ಖಂಡಿತ ಅನುದಾನಿತ ಶಾಲೆಗಳು ಕನ್ನಡ ಮಾಧ್ಯಮ ವಾಗಿರುವುದರಿಂದ ಅವುಗಳಿಗೆ ಕಾನ್ವೆಂಟ್ ಗಳಿಂದ ಪೈಪೋಟಿಯನ್ನು ಎದುರಿಸದೆ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದರು.
ರಾಷ್ಟ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಶೇಕಡಾ 65% ಇದೆ ಪ್ರಾಮಾಣಿಕವಾಗಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಶಿಕ್ಷಕರು ತಮ್ಮ ಹಕ್ಕಿಗಾಗಿ ಹೋರಾಟ ನೆಡೆಸಿದಂತ ಸಂದರ್ಭದಲ್ಲಿ ಸರ್ಕಾರದ ಯಾವುದೇ ಸಚಿವರು ಶಾಸಕರು ಹೋಗದಿರುವುದು ಶಿಕ್ಷಕರುಗಳ ಮನಸ್ಸಿಗೆ ನೋವಾಗಿದೆ ಆದ್ದರಿಂದ ಈ ಬಾರಿ ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ ಎಂದು ಅವರು ಹೇಳಿದರು.
ಹಿಂದೆ ಈ ಕ್ಷೇತ್ರದಿಂದ ಶಾಸಕರಾಗಿದ್ದವರು ಅವರಿಗೆ ಸಿಕ್ಕಿದಂಥಹ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ನೀವು ವಿಫಲರಾಗಿದ್ದೀರಿ, ನಿಮಗೆ ಈಗಿನ ಸರ್ಕಾರವನ್ನು ಟೀಕಿಸುವುದಕ್ಕೆ ನೈತಿಕತೆಯಿಲ್ಲ ಶಿಕ್ಷಕರೆಲ್ಲ ಸರ್ಕಾರದ ಪರವಾಗಿದ್ದಾರೆ . ಅವರ ಬಹು ದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಶಿಕ್ಷಕರು ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ ಪಂ ಸದಸ್ಯ ಯಜಮಾನ್ ಮಹೇಶ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಹಾಗೂ ಕೊಳಾಲ ನಾಗರಾಜ್, ಕಾರ್ಯದರ್ಶಿ ನಂಜುಂಡಪ್ಪ, ಮಾಳೆ ಕೃಷ್ಣಪ್ಪ, ದೇವರಾಜ್ ಮಾಸ್ತಿಗೊಂಡನಹಳ್ಳಿ,ರಾಮಡೀಹಳ್ಳಿ ತ್ರೈಲೋಕ್ಯನಾಥ್ , ಮಹೇಂದ್ರ, ಶ್ರೀನಿವಾಸ್, ಟಿ. ಹೆಚ್ ಗುರುದತ್, ಶಶಿಶೇಖರ್, ಕೆಂಪರಾಜ್, ಶಿವರಾಜ್ ಜೋಗಿಪಾಳ್ಯ , ಪುರ ರಾಮಚಂದ್ರಯ್ಯ,ಗವಿರಂಗಯ್ಯ,ಚಂಡೂರು ಮೋಹನ್.,ಪ್ರಕಾಶ್ ಸೇರಿದಂತೆ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


