ತುಮಕೂರು: ಶ್ರೀ ಸಿದ್ಧಗಂಗಾ ಮಠದಲ್ಲಿ 10,000 ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ, ಔಷಧಿಗಳ ವಿತರಣೆ ಹಾಗೂ ಮಕ್ಕಳಿಗೆ ಕನ್ನಡಕ ವಿತರಣೆಯ ಉದ್ಘಾಟನಾ ಕಾರ್ಯಕ್ರಮ 25-10-21 ರಿಂದ 31-10-21ರವರೆಗೆ ನಡೆಯಿತು.
ರೋಟರಿ ಬಿಲ್ವಪ್ರಿಯ ಬೆಳ್ಳಾವಿ ಹಾಗೂ ಲಯನ್ಸ್ ಕ್ಲಬ್ ಮತ್ತು ಬೆಂಗಳೂರಿನ 9 ರೋಟರಿ ಕ್ಲಬ್ ಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಆರೋಗ್ಯ ಶಿಬಿರದಲ್ಲಿ ಉಚಿತವಾಗಿ ಕಣ್ಣಿನ ಚಿಕಿತ್ಸೆ ಚರ್ಮದ ಚಿಕಿತ್ಸೆ ದಂತ ಚಿಕಿತ್ಸೆ ಹಾಗೂ ವಿನ್ಸ್ ಕೈಗಳನ್ನು ತೊಳೆಯುವ ವಿಧಾನ ಹಾಗೂ ದೇಹದ ಶುಚಿತ್ವದ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಮಕ್ಕಳ ಕಲಿಕಾ ಪೂರ್ವಕವಾಗಿ ರೋಟರಿ ಯೂತ್ ಲೀಡರ್ ಶಿಪ್ ಅವಾರ್ಡ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಣ್ಣಿನ ಲೋಪ ದೋಷವುಳ್ಳ ಸಿದ್ದಗಂಗಾ ಮಠದ ಮಕ್ಕಳಿಗೆ ಉಚಿತವಾಗಿ ಕನ್ನಡಕ ವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಸ್.ನಾಗೇಂದ್ರ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಆಶಾ ಪ್ರಸನ್ನಕುಮಾರ್, ಬಾಲಾಜಿ ಡಿಸ್ಟ್ರಿಕ್ಟ್ ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ಭಾಗವಹಿಸಿದ್ದರು.
ಡಾಕ್ಟರ್ ಶ್ಯಾಮ್ ಸುಂದರ್ ಹಾಗೂ ರಾಜೇಶ್ ಹಿರೇಮಠ್ ಈ ಕಾರ್ಯಕ್ರಮದ ನಿರ್ದೇಶಕರಾಗಿದ್ದರು. ರೋಟರಿ ಬೆಂಗಳೂರು ಸೌತ್ ಅಧ್ಯಕ್ಷೆ ರಾಜೇಶ್ವರಿ , ರೋಟರಿ ತುಮಕೂರು ಈಸ್ಟ್ ಅಧ್ಯಕ್ಷ ನಾಗರಾಜ್ ಶೆಟ್ಟಿ, ಪ್ರಸಾದ್ ಕೆಜೆ ಕಾರ್ಯಕ್ರಮ ಆಯೋಜಿಸಿದ್ದರು.
- ಪ್ರಸಾದ್ ಕೆ.ಜೆ. ತುಮಕೂರು