ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಗುಂಪುಕಟ್ಟಿಕೊಂಡು ರಸ್ತೆಯಲ್ಲಿಯೇ ಹೊಡೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿನಿಯರ ವರ್ತನೆಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರು ಇನ್ಸ್ಟಾಗ್ರಾಮ್ ನಲ್ಲಿ ಗಲಾಟೆ ಆರಂಭಿಸಿದ್ದು, ಪರಸ್ಪರ ಸವಾಲು ಹಾಕಿಕೊಂಡು ಕೈಕೈ ಮಿಲಾಯಿಸಿದ್ದು, ರಕ್ತ ಬರುವಂತೆ ಪರಸ್ಪರ ಹೊಡೆದಾಟ ನಡೆಸಿದ್ದು, ಈ ವೇಳೆ ಸಾರ್ವಜನಿಕರು ವಿದ್ಯಾರ್ಥಿನಿಯರ ಜಗಳವನ್ನು ಬಿಡಿಸಿ, ಎಚ್ಚರಿಸಿ ಸ್ಥಳದಿಂದ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ಸುಮಾರು 20ರಷ್ಟಿದ್ದ ವಿದ್ಯಾರ್ಥಿನಿಯರು ಪರಸ್ಪರ ಹಲ್ಲೆ ನಡೆಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ವಿದ್ಯಾರ್ಥಿನಿಯರು ಯೂನಿಫಾರ್ಮ್ ಧರಿಸಿದ್ದರೆ, ಇನ್ನು ಕೆಲವು ವಿದ್ಯಾರ್ಥಿನಿಯರು ಕಲರ್ ಡ್ರೆಸ್ ಧರಿಸಿರುವುದು ಕಂಡು ಬಂದಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಸಂಸ್ಥೆ ಪೋಷಕರನ್ನು ಕರೆಸಿ ಸಭೆ ನಡೆಸಿದೆ ಎನ್ನಲಾಗುತ್ತಿದೆ. ಘಟನೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5