ಚಿಕ್ಕನಾಯಕನಹಳ್ಳಿ: ಪಟ್ಟಣದ ಶಕ್ತಿ ಮಾತೆ ಶ್ರೀ ಮಹಾಲಕ್ಷ್ಮೀ ಮದ್ದರ ಲಕ್ಕಮ್ಮ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಅಂಗವಾಗಿ ವಿಜಯ ದಶಮಿ ದಿನದಂದು ಸ್ವಚ್ಛತೆಯೇ ಸೇವೆ ಎಂಬ ದ್ಯೇಯ ವಾಕ್ಯದೊಂದಿಗೆ ಪಟ್ಟಣದ ಪುರಸಭೆಯ ಮಹಿಳಾ ಪೌರ ಕಾರ್ಮಿಕರ ಪಾದ ಪೂಜೆಯನ್ನು ದೇವಸ್ಥಾನದ ಮುಖ್ಯಸ್ಥರಾದ ಶ್ರೀ ಲಕ್ಷ್ಮೀಶ್ ರವರು ನೆರವೇರಿಸಿದರು.
ಇದೇ ವೇಳೆ ಅಕ್ಷತ ಲಕ್ಷ್ಮೀಶ್, ನಾಗರತ್ನ ರಂಗಸ್ವಾಮಿ ರವರು ಮಂಗಳ ದ್ರವ್ಯಗಳನ್ನು ವಸ್ತ್ರ ನೀಡಿ ಗೌರವ ಸಲ್ಲಿಸಿದರು. ನಂತರ ಕೌಮಾರಿ ಪೂಜೆ ಹತ್ತು ವರ್ಷದ ಒಳಗಿನ ಹೆಣ್ಣುಮಕ್ಕಳಿಗೂ ಸಹ ಪಾದ ಪೂಜೆ ಮಾಡಲಾಯಿತು.
ನಂತರ ಶಮಿ ಪೂಜೆ, ಕದಲಿ ವೃಕ್ಷ ಛೇದನ, ಬನ್ನಿ ಪ್ರಸಾದ ನೀಡಲಾಯಿತು. ದೇವಾಲಯದ ಧರ್ಮದರ್ಶಿಗಳಾದ ಶ್ರೀರಂಗ ಸ್ವಾಮಿ ಸಿ.ಎನ್. ರವರು ಎಲ್ಲ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ರಂಗರಾಜು, ಮೋಹಿತ್, ಮನೋಜ್, ಯೋಗ ಗುರುಗಳಾದ ಚರಣ್, ಕುಮಾರ್, ರಾಜಶೇಖರ್ ಪೋಚ್ಕಟ್ಟೆ, ಚರಣ್ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ಎಲ್ಲ ಭಕ್ತರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q