ಬೆಂಗಳೂರು: ಯಡಿಯೂರಪ್ಪ ವಿರುದ್ಧ ರೆಬೆಲ್ ನಾಯಕರು ನಿಂದನೆ, ವಾಗ್ದಾಳಿ ನಡೆಸುತ್ತಿದ್ದರೂ, ತಟಸ್ಥ ನಾಯಕರ ಬಣದಲ್ಲಿರುವವರು ಅದಕ್ಕೆ ಕಡಿವಾಣ ಹಾಕಲು ಮುಂದಾಗದ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಭಿನ್ನರ ಬಣ ಒಂದೆಡೆಯಾದರೆ, ಇನ್ನೊಂದೆಡೆ ಯಡಿಯೂರಪ್ಪ ಪರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬಣ ಪರಸ್ಪರ ಹೇಳಿಕೆ, ಪ್ರತಿ ಹೇಳಿಕೆಗಳನ್ನು ನೀಡುತ್ತಿದೆ. ಹಿರಿಯರಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ ಇತರರು ತಟಸ್ಥರಾಗಿದ್ದಾರೆ.
ಗುರುವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ತಟಸ್ಥ ಬಣದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಿಜಯೇಂದ್ರ, ತಟಸ್ಥರು ಏನು ಎಂಬುದು ಗೊತ್ತಿದೆ, ಯಡಿಯೂರಪ್ಪನವರ ತೇಜೋವಧೆ ಮಾಡುತ್ತಿರುವವರ ಬಾಯಿ ಮುಚ್ಚಿಸಲಿ. ಯಡಿಯೂರಪ್ಪನವರನ್ನು ನಿಂದಿಸುತ್ತಿದ್ದರೂ ಕಡಿವಾಣ ಹಾಕದೆ ಸುಮ್ಮನಿರುವುದೂ ಅಪರಾಧ ಎಂದು ವಿಜಯೇಂದ್ರ ಗುಡುಗಿದ್ದಾರೆ.
‘ಯಡಿಯೂರಪ್ಪನವರ ಮೇಲಿನ ವಾಗ್ದಾಳಿ ತಡೆಯಲು ರಾಷ್ಟ್ರೀಯ ನಾಯಕರೇ ಬರಬೇಕೆ? ಹಾಗಾದರೆ ಈ ನಾಯಕರಿಗೆ ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನನ್ನ ವಿರುದ್ಧ ವರಿಷ್ಠರಿಗೆ ಏನಾದರೂ ದೂರು ಕೊಡಲಿ ಅಥವಾ ನಾಲ್ಕು ಗೋಡೆ ಮಧ್ಯೆ ಮಾತನಾಡಲಿ. ಅದನ್ನು ಬಿಟ್ಟು ನಿತ್ಯ ಸಾರ್ವಜನಿಕವಾಗಿ ಟೀಕಿಸುವುದು ಲಕ್ಷಾಂತರ ಕಾರ್ಯಕರ್ತರಿಗೆ ಮಾಡುವ ಅಪಮಾನ. ನಾನು ತಿರುಗೇಟು ನೀಡಲಾರಂಭಿಸಿದರೆ, ಅವರು ಕುಗ್ಗಿ ಹೋಗುತ್ತಾರೆ ಎಂದು ಎಚ್ಚರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx