ಕೊರಟಗೆರೆ ತಾಲೂಕಿನ ಅರಸಪುರ ಹಾಗೂ ಬಿಡಿ ಪುರ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಬಿಳೇ ಕಲ್ಲಹಳ್ಳಿ, ಭಕ್ತರಹಳ್ಳಿ, ಕಾಶಪುರ ಗ್ರಾಮಗಳಲ್ಲಿ ನಾಲಕ್ಕು ಹೆಚ್ಚು ಕೋಳಿ ಫಾರಂಗಳ ನ್ನುಅನಧಿಕೃತವಾಗಿ ನಡೆಸುತಿದ್ದು, ಕೋಳಿ ಫಾರಂನಿಂದ ಬರುವ ನೈರ್ಮಲ್ಯದ ಕೊರತೆಯಿಂದ ಗ್ರಾಮಸ್ಥರು ನೆಮ್ಮದಿಯ ಜೀವನ ನಡೆಸಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ ಜನರು ಕುಡಿಯೋ ನೀರಿನಲ್ಲೂ ತಿನ್ನುವ ಅನ್ನದಲ್ಲೂ ನೊಣಗಳು ಹಾರಡುತ್ತಿದೆ. ಡೈರಿಗೆ ತೆಗೆದುಕೊಂಡು ಹೋಗುವ ಹಾಲಿನ ಮೇಲು ಇಂಡು ಇಂಡು ನೊಣಗಳು ತುಂಬಿ ತುಳುಕುತ್ತಿದೆ. ಹಿರಿಯರು, ಮಕ್ಕಳನ್ನು ಮನೆಯಲ್ಲಿ ಮಲಗಲು ಕಷ್ಟಪಡುವ ಪರಿಸ್ಥಿತಿ ಉಂಟಾಗಿದೆ.
ಬಿಳೇ ಕಲ್ಲಹಳ್ಳಿ ಗ್ರಾಮದ ಸಮೀಪವಿರುವ ನಲ್ಲಪ್ಪ ಕೋಳಿ ಫಾರಂ ನ್ನು ಅನಧಿಕೃತವಾಗಿ ನಡೆಸುತ್ತಿದ್ದಾರೆ. ಈ ಕೋಳಿ ಫಾರಂನಲ್ಲಿ ಸರಿಯಾದ ರೀತಿಯ ನೈರ್ಮಲ್ಯದ ವ್ಯವಸ್ಥೆಗಳಿಲ್ಲದೆ ನಡೆಯುತ್ತಿವೆ.ಇಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿಲ್ಲ. ಕೋಳಿ ಫಾರಂ ನಡೆಸಲು ಮಾಲೀಕ ನಲ್ಲಪ್ಪ ಅಗ್ನಿಶಾಮಕ ದಳದ ಪರ್ಮಿಷನ್, ಸ್ಥಳೀಯ ಗ್ರಾಮ ಪಂಚಾಯಿತಿ ಪರ್ಮಿಷನ್, ಪಶು ಇಲಾಖೆಯ ಪರ್ಮಿಷನ್ ಹಾಗೂ ಹೈನುಗಾರಿಕೆಗೆ ಬೇಕಾದ ಯಾವ ರೀತಿಯ ಅನುಮತಿಯನ್ನು ಕೂಡ ಪಡೆದಿಲ್ಲ. ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಗ್ಲೌಸ್ ಹಾಗೂ ಮಾಸ್ಕ್ ಹಾಕಿಕೊಳ್ಳದೆ ಕೆಲಸ ಮಾಡುತ್ತಿದ್ದಾರೆ.
ಇಲ್ಲಿ ಕೆಲಸದವರನ್ನು ಹಗಲು ರಾತ್ರಿ ಎನ್ನದೆ ಖಾಸಗಿ ವ್ಯಕ್ತಿಯೊಬ್ಬರು ದುಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೋಳಿಗಳಿಗೆ ಪೂರೈಸುವ ಅದೇ ನೀರನ್ನು ಅಲ್ಲಿನ ಸಿಬ್ಬಂದಿಗಳ ಊಟಕ್ಕೆ ಹಾಗೂ ಕುಡಿಯುವುದಕ್ಕೂ ಪೂರೈಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಕೋಳಿ ಫಾರಂ ಉದ್ದಕ್ಕೂ ಕಸದ ರಾಶಿಯ ಹಿಂಡು ತುಂಬಿದ್ದು ಇದರಿಂದಾಗಿ ಗ್ರಾಮಸ್ಥರಿಗೆ ಆರೋಗ್ಯದ ಸಮಸ್ಯೆ ಕಾಡಬಹುದೇ ಎಂದು ಆತಂಕ ಪಡುವಂತಾಗಿದೆ.
ಕೋಳಿ ಫಾರಂನಿಂದ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪಾರ್ಯಾಸವಾಗಿದೆ. ಇದಕ್ಕೆ ಕಡಿವಾಣ ಹಾಕುವ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಇಲ್ಲಿನ ಅನಧಿಕೃತ ಕೋಳಿ ಫಾರಂ ಮಾಲೀಕರು ಕೊಡುವ ಹಣಕ್ಕೆ ತಮ್ಮನ ತಾವು ಮಾರಿಕೊಂಡಿದ್ದಾರೆ ಅಧಿಕಾರಿಗಳು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


