nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಹೊಸ ಸಂಕಷ್ಟ? ದಾಖಲೆ ಪರಿಶೀಲನೆ ಬಗ್ಗೆ ಮಹತ್ವದ ಮಾಹಿತಿ

    October 20, 2026

    ತುಮಕೂರಿನ ದೇವರಾಯನದುರ್ಗದಲ್ಲಿ ನಿಜಕ್ಕೂ ಕಾಡುಮನುಷ್ಯರು ಪ್ರತ್ಯಕ್ಷರಾಗಿದ್ದಾರಾ? ಪೊಲೀಸರ ಸ್ಪಷ್ಟನೆ ಇಲ್ಲಿದೆ

    October 20, 2026

    ಸೆನ್ಸೆಕ್ಸ್‌–ನಿಫ್ಟಿ ಏರಿಕೆಗೆ ಕಾರಣವೇನು? ಐಟಿ ಷೇರುಗಳ ಪ್ರದರ್ಶನದಿಂದ ಮಾರುಕಟ್ಟೆಯಲ್ಲಿ ಚೈತನ್ಯ

    October 20, 2026
    Facebook Twitter Instagram
    ಟ್ರೆಂಡಿಂಗ್
    • ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಹೊಸ ಸಂಕಷ್ಟ? ದಾಖಲೆ ಪರಿಶೀಲನೆ ಬಗ್ಗೆ ಮಹತ್ವದ ಮಾಹಿತಿ
    • ತುಮಕೂರಿನ ದೇವರಾಯನದುರ್ಗದಲ್ಲಿ ನಿಜಕ್ಕೂ ಕಾಡುಮನುಷ್ಯರು ಪ್ರತ್ಯಕ್ಷರಾಗಿದ್ದಾರಾ? ಪೊಲೀಸರ ಸ್ಪಷ್ಟನೆ ಇಲ್ಲಿದೆ
    • ಸೆನ್ಸೆಕ್ಸ್‌–ನಿಫ್ಟಿ ಏರಿಕೆಗೆ ಕಾರಣವೇನು? ಐಟಿ ಷೇರುಗಳ ಪ್ರದರ್ಶನದಿಂದ ಮಾರುಕಟ್ಟೆಯಲ್ಲಿ ಚೈತನ್ಯ
    • ಬೆಳಗ್ಗೆ ಎದ್ದ ತಕ್ಷಣ ಸೀನುವ ಅಭ್ಯಾಸವಿದೆಯೇ? ನಿರ್ಲಕ್ಷ್ಯ ಮಾಡಬೇಡಿ, ಇದು ಈ ಲಕ್ಷಣವಾಗಿರಬಹುದು!
    • ಕ್ರೈಂ ಸುದ್ದಿಗಳು: ಮನೆ ಬೀಗ ಮುರಿದು ಚಿನ್ನಾಭರಣ ಕಳವು, ಕೇಬಲ್ ವೈರ್–ಪೈಪ್ ಕಳವು
    • ಕಾರ್ಪೆಂಟರ್ ಶಿವು ಕೊಲೆ ಪ್ರಕರಣ: ಆರೋಪಿಯ ಸೆರೆ,  ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
    • ಸಹಕಾರಿ ಕ್ಷೇತ್ರಗಳು ಅಶಕ್ತರಿಗೆ ನೆರವಾಗಲಿ: ಕೇಂದ್ರ ಸಚಿವ ವಿ. ಸೋಮಣ್ಣ
    • ಮಾಹಿತಿ ಹಕ್ಕು ಕಾಯ್ದೆಯಡಿ ತಪ್ಪು ದಾಖಲೆ ನೀಡಿದ ಆರೋಪ: ರೈತ ಸಂಘಟನೆಗಳಿಂದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೈಕ್ರೋ ಫೈನಾನ್ಸ್ ಹಾವಳಿ: ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದ ವಿನುತ ಕುಟುಂಬ
    ತುಮಕೂರು January 31, 2025

    ಮೈಕ್ರೋ ಫೈನಾನ್ಸ್ ಹಾವಳಿ: ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದ ವಿನುತ ಕುಟುಂಬ

    By adminJanuary 31, 2025No Comments2 Mins Read
    vinutha family

    ತುಮಕೂರು: ಮೈಕ್ರೋ ಫೈನಾನ್ಸ್ ಕಂಪನಿಯ ಕಿರುಕುಳದಿಂದ ಬೇಸತ್ತು ಸ್ವಗ್ರಾಮವನ್ನು ತೊರೆದಿದ್ದ ವಿನುತ ಮತ್ತು ಮಾರುತಿ ಕುಟುಂಬ ಮನೆಗೆ ಮರಳಿದ್ದು, ಸ್ವಗ್ರಾಮ ಸೇರಲು ಕಾರಣವಾದ ಜಿಲ್ಲಾಡಳಿತಕ್ಕೆ ಕುಟುಂಬ ಕೃತಜ್ಞತೆ ಸಲ್ಲಿಸಿದೆ.

    ಜಿಲ್ಲಾಧಿಕಾರಿಗಳ ಆದೇಶಕ್ಕೆ ಜನರಿಂದ ಮೆಚ್ಚುಗೆ :

    ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆಯ ನಿವಾಸಿ ವಿನುತ ಮತ್ತು ಮಾರುತಿ ದಂಪತಿ ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಯಿಂದ 2.50ಲಕ್ಷ ರೂ.ಗಳ ಸಾಲ ಪಡೆದು, ಕೆಲವು ಕಂತುಗಳನ್ನು ಕಟ್ಟಲು ಸಾಧ್ಯವಾಗದಿದ್ದಾಗ ಫೈನಾನ್ಸ್ ಕಂಪನಿಯು ಯಾವುದೇ ನೋಟೀಸ್ ನೀಡದೆ ಏಕಾಏಕಿ ವಿನುತ ಅವರ ಮನೆಯ ಮೇಲೆ “ಈ ಸ್ವತ್ತು ಫೈವ್ ಸ್ಟಾರ್ ಫೈನಾನ್ಸ್ ಕಂಪನಿಗೆ ಅಡಮಾನವಾಗಿದೆ” ಎಂದು ಬರೆಸಿ ಅವಮಾನ ಮಾಡಿದ್ದರಿಂದ ಕುಟುಂಬವು ಸ್ವಗ್ರಾಮ ಬಿಟ್ಟು ಬೆಂಗಳೂರು ಸೇರಿತ್ತು.

    ವಿಷಯ ತಿಳಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರು ಜನವರಿ 30ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವಿನುತ ಅವರು ಪಡೆದ 2.50ಲಕ್ಷ ಸಾಲಕ್ಕೆ ಕಂಪನಿಯು 4.50ಲಕ್ಷ ರೂ.ಗಳನ್ನು ವಸೂಲಿ ಮಾಡಿದೆ. ಪಡೆದ ಸಾಲಕ್ಕೆ ಪ್ರತಿ ಕಂತನ್ನು ಪಾವತಿ ಮಾಡಿದ್ದು, ಕೆಲವು ಕಂತನ್ನು ಕಟ್ಟಲು ಸಾಧ್ಯವಾಗದಿದ್ದಾಗ ಫೈನಾನ್ಸ್ ಕಂಪನಿಯು ವಿನುತ ಅವರ ಕುಟುಂಬಕ್ಕೆ ಕಿರುಕುಳ ನೀಡಿ ಊರು ಬಿಡಲು ಕಾರಣವಾಗಿರುವುದು ಬೆಳಕಿಗೆ ಬಂದಿದೆ.

    ತಕ್ಷಣವೇ ಫೈನಾನ್ಸ್ ಕಂಪನಿಯು ಮನೆಯ ಗೋಡೆಯ ಮೇಲೆ ಬರೆಸಿರುವುದನ್ನು ಅಳಿಸಿ ಹೊಸದಾಗಿ ಬಣ್ಣ ಬಳಿಸಿ, ಕುಟುಂಬವನ್ನು ಮರಳಿ ಮನೆ ಸೇರಿಸಲು ಕ್ರಮಕೈಗೊಳ್ಳಬೇಕೆಂದು ತಹಶೀಲ್ದಾರ್ ಮಂಜುನಾಥ್ ಹಾಗೂ ಸಿಪಿಐ ಅನಿಲ್ ಅವರಿಗೆ ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಆದೇಶಿಸಿದರು.

    ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸಿದ ಅಧಿಕಾರಿಗಳ ತಂಡವು ಮನೆ ಗೋಡೆ ಮೇಲೆ ಬರೆಸಿದ ಸಾಲುಗಳನ್ನು ಅಳಿಸಿ ಬಣ್ಣ ಬಳಿದು ಕುಟುಂಬವನ್ನು ಮನೆಗೆ ಮರಳಿ ಕರೆಸುವಲ್ಲಿ ಯಶಸ್ವಿಯಾಗಿದೆ. ವಿನುತ ಮತ್ತು ಮಾರುತಿ ಕುಟುಂಬವು ಸ್ವಗ್ರಾಮಕ್ಕೆ ಮರಳಲು ಅವಕಾಶ ಮಾಡಿಕೊಟ್ಟ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಧಿಕಾರಿಗಳ ತಂಡದ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ತುಮಕೂರಿನ ದೇವರಾಯನದುರ್ಗದಲ್ಲಿ ನಿಜಕ್ಕೂ ಕಾಡುಮನುಷ್ಯರು ಪ್ರತ್ಯಕ್ಷರಾಗಿದ್ದಾರಾ? ಪೊಲೀಸರ ಸ್ಪಷ್ಟನೆ ಇಲ್ಲಿದೆ

    October 20, 2026

    ಕ್ರೈಂ ಸುದ್ದಿಗಳು: ಮನೆ ಬೀಗ ಮುರಿದು ಚಿನ್ನಾಭರಣ ಕಳವು, ಕೇಬಲ್ ವೈರ್–ಪೈಪ್ ಕಳವು

    October 19, 2026

    ಜರ್ನೋತ್ಸವ–2026: “ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ”

    October 19, 2026

    Comments are closed.

    Our Picks

    ಜಿಯೋ ಗ್ರಾಹಕರಿಗೆ ಶಾಕ್! ಉಚಿತ ಹಾಟ್‌ ಸ್ಟಾರ್ ಸೌಲಭ್ಯ ಬಂದ್‌; OTT ಪ್ರಿಯರಿಗೆ ಇನ್ನು ಯಾವುದು ಬೆಸ್ಟ್‌ ಪ್ಲಾನ್?

    October 19, 2026

    ತೆರಿಗೆದಾರರೇ ಗಮನಿಸಿ! ಟ್ಯಾಕ್ಸ್ ಆಡಿಟ್ ಸಲ್ಲಿಕೆಗೆ ಅಕ್ಟೋಬರ್ 21 ಕೊನೆಯ ದಿನ; ತಪ್ಪಿದರೆ ಎಷ್ಟು ಲಕ್ಷ ದಂಡ?

    October 19, 2026

    ಪಿಎಫ್ ಪಾವತಿ ಗಡುವು ವಿಸ್ತರಣೆ: ಉದ್ಯೋಗದಾತರು ಈ ದಿನಾಂಕವನ್ನು ಮರೆಯಬೇಡಿ!

    October 19, 2026

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಹೊಸ ಸಂಕಷ್ಟ? ದಾಖಲೆ ಪರಿಶೀಲನೆ ಬಗ್ಗೆ ಮಹತ್ವದ ಮಾಹಿತಿ

    October 20, 2026

    ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಬೆಂಗಳೂರು ವಿದ್ಯುತ್…

    ತುಮಕೂರಿನ ದೇವರಾಯನದುರ್ಗದಲ್ಲಿ ನಿಜಕ್ಕೂ ಕಾಡುಮನುಷ್ಯರು ಪ್ರತ್ಯಕ್ಷರಾಗಿದ್ದಾರಾ? ಪೊಲೀಸರ ಸ್ಪಷ್ಟನೆ ಇಲ್ಲಿದೆ

    October 20, 2026

    ಸೆನ್ಸೆಕ್ಸ್‌–ನಿಫ್ಟಿ ಏರಿಕೆಗೆ ಕಾರಣವೇನು? ಐಟಿ ಷೇರುಗಳ ಪ್ರದರ್ಶನದಿಂದ ಮಾರುಕಟ್ಟೆಯಲ್ಲಿ ಚೈತನ್ಯ

    October 20, 2026

    ಬೆಳಗ್ಗೆ ಎದ್ದ ತಕ್ಷಣ ಸೀನುವ ಅಭ್ಯಾಸವಿದೆಯೇ? ನಿರ್ಲಕ್ಷ್ಯ ಮಾಡಬೇಡಿ, ಇದು ಈ ಲಕ್ಷಣವಾಗಿರಬಹುದು!

    October 20, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.