ಚಿಕ್ಕಮಗಳೂರಿನ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿಶ್ವಕರ್ಮ ಆಚಾರ್ಯ ಅವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡಮಿಯ 16 ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದಲ್ಲಿ 2 ಅಡಿ ಎತ್ತರದ ಕಲ್ಲಿನ ನಾಟ್ಯಗಣಪತಿ ಕಲಾಕೃತಿಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಚಿತ್ರಕಲೆ ಮತ್ತು ಶಿಲ್ಪಕಲೆಯ ಮುಖಾಂತರ ತಮ್ಮ ವಿಶಿಷ್ಟ ಸೇವೆಯ ಮುಖಾಂತರ ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ ಲಭಿಸಿದ್ದ ಇವರಿಗೆ , ಈ ಬಾರಿಯ ಶಿಲ್ಪಕಲಾ ಕ್ಷೇತ್ರದ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಕನ್ನಡಭವನ ನಯನ ಸಭಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಿಲ್ಪಕಲಾ ಅಕಾಡಮಿಯ ಅಧ್ಯಕ್ಷರಾದ ವೀರಣ್ಣ ಅರ್ಕಾಸಾಲಿ ಹಾಗೂ ಪ್ರೊ.ನಿರಂಜನ್ ವಾನಳ್ಳಿ ಮಾನ್ಯ ಕುಲಪತಿಗಳು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ , ಹಿರಿಯ ಶಿಲ್ಪಿ ಎಂ ರಾಮಮೂರ್ತಿ, ರಿಜಿಸ್ಟ್ರಾರ್ ಆರ್ ಚಂದ್ರಶೇಖರ್ ರವರು ಪ್ರಶಸ್ತಿ ಪ್ರದಾನ ಮಾಡಿದರು.
ವರದಿ: ಆನಂದ್ ತಿಪಟೂರ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy