ಅಥಣಿ: ಅಥಣಿ ಮತಕ್ಷೇತ್ರದಲ್ಲಿ ಬಾಂಧಾರಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಕೊಟ್ಟು 16ಕ್ಕೂ ಅಧಿಕ ಬಾಂದಾರಗಳನ್ನು ಮಂಜೂರು ಮಾಡಲಾಗಿದ್ದು ಸಧ್ಯ ಕಾಮಗಾರಿಗಳು ಪ್ರಾರಂಭವಾಗಿವೆ, ಈಗಾಗಲೇ ಸುಮಾರು 28.98 ಕೋಟಿ ರೂ ಅನುದಾನವನ್ನು ಬಾಂದಾರುಗಳ ರಿಪೇರಿ ಕಾರ್ಯಗಳಿಗೆ ತರಲಾಗಿದ್ದು ಶೀಘ್ರ ಭೂಮಿಪೂಜೆ ನೆರವೇರಿಸಲಿದ್ದೆವೆ, ಮತಕ್ಷೇತ್ರದ ಜನತೆ ಆಶೀರ್ವಾದ ಮಾಡಿ ನನ್ನನ್ನು ಶಾಸಕರಾಗಿ ಮಾಡಿದ್ದು ಅವರ ಸೇವೆ ಮಾಡುತ್ತಿದ್ದೆನೆ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು.
ಅವರು ತಾಲೂಕಿನ ದೇಸಾರಟ್ಟೆ ಗ್ರಾಮದಲ್ಲಿ 1 ಕೋಟಿ 60 ಲಕ್ಷ ರೂ ವೆಚ್ಚದ ದೇಸಾರ ಕೊಕಟನೂರ ರಸ್ತೆ ಕಾಮಗಾರಿ, ಕೊಕಟನೂರ ಗ್ರಾಮದಲ್ಲಿ 50 ಲಕ್ಷ ರೂ ವೆಚ್ಚದ ಎಸ್‌ಸಿ ಕಾಲೋನಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ, 2 ಕೋಟಿ 11 ಲಕ್ಷ ರೂ ವೆಚ್ಚದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕಟ್ಟಡ ಕಾಮಗಾರಿ, 5 ಲಕ್ಷ ರೂ. ವೆಚ್ಚದ ಸ್ತ್ರೀ ಕರಿಸಿದ್ದೇಶ್ವರ ದೇವಸ್ಥಾನದ ಸಮುದಾಯ ಭವನ ಕಟ್ಟಡ ಕಾಮಗಾರಿ, 1 ಕೋಟಿ ರೂ ವೆಚ್ಚದ ಹಿರೇಹಳ್ಳಕ್ಕೆ ಬ್ರಿಡ್ಜ್ ನಿರ್ಮಾಣ ಕಾಮಗಾರಿ, 5 ಲಕ್ಷ ರೂ ವೆಚ್ಚದ ಶ್ರೀ ಅಪ್ಪಯ್ಯ ಸ್ವಾಮಿ ದೇವಸ್ಥಾನದ ಸಮುದಾಯ ಭವನ ಕಟ್ಟಡ ಕಾಮಗಾರಿ, 2 ಕೋಟಿ 65 ಲಕ್ಷ ರೂ ವೆಚ್ಚದ ಕೊಕಟನೂರ – ಸುಟ್ಟಟ್ಟ ರಸ್ತೆ ಕಾಮಗಾರಿ,
ಯಲ್ಲಮ್ಮವಾಡಿ ಗ್ರಾಮದಲ್ಲಿ 14 ಲಕ್ಷ ರೂ 1 ಪ್ರಾಥಮಿಕ ಶಾಲಾ ಕೊಠಡಿ ಕಾಮಗಾರಿ, 3 ಕೋಟಿ ರೂ ವೆಚ್ಚದ ಕೊಕಟನೂರ ತುಂಗಳ ರಸ್ತೆ ಕಾಮಗಾರಿ, ಸುಟ್ಟಟ್ಟೆ ಗ್ರಾಮದಲ್ಲಿ 3 ಕೋಟಿ 50 ಲಕ್ಷ ರೂ ವೆಚ್ಚದ ಯಲ್ಲಮವಾಡಿ ಝಂಜರವಾಡ ರಸ್ತೆ ಕಾಮಗಾರಿ, ಕಕಮರಿ ಗ್ರಾಮದಲ್ಲಿ 1 ಕೋಟಿ 38 ಲಕ್ಷ ರೂ ವೆಚ್ಚದ ಡೋನಿಗೆ ಅಡ್ಡಲಾಗಿ ಸೇತುವೆ ಸಹಿತ ಬಾಂದರ ನಿರ್ಮಾಣ, ಬಾಡಗಿ ಗ್ರಾಮದಲ್ಲಿ 95 ಲಕ್ಷ ರೂ ವೆಚ್ಚದ ಹಿರೇಹಳ್ಳಕ್ಕೆ ಸೇತುವೆ ಸಹಿತ ಬಾಂದರೆ ಕಾಮಗಾರಿ ಸೇರಿದಂತೆ ಒಟ್ಟಾರೆ 16,93 ಕೋಟಿ ರೂಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA