ಸರಗೂರು: ಆನೆಯ ದಾಳಿಯಿಂದ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ಸರಗೂರು ತಾಲೂಕಿನ ಮಾದಪುರ ಗ್ರಾಮದಲ್ಲಿ ಗುರುವಾರ ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ನಡೆದಿದೆ.
ಮಾದಪುರ ಗ್ರಾಮದ ಪುಟ್ಟಸ್ವಾಮಿ ಎಂಬವರ ಪುತ್ರ ಚಂದ್ರ ಎಂಬವರು ಆನೆಯ ದಾಳಿಗೊಳಗಾದವರಾಗಿದ್ದು, ಸದ್ಯ ಅವರು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯ ಮಾಹಿತಿ ನೀಡಿದ ಮದಾಪುರ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಮಲ್ಲು, ಹಸು-ಕರುಗಳನ್ನು ಕಟ್ಟಿ ಹಾಕಲು ಚಂದ್ರ ಅವರು ಬೆಳಗ್ಗೆ ಬಂದಿದ್ದು, ಈ ವೇಳೆ ಶಬ್ಧ ಕೇಳಿ ಕಳ್ಳರು ಅಂದುಕೊಂಡು ಹುಡುಕುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ. ಬೆಳಗ್ಗಿನ ಜಾವದಲ್ಲಿ ಇಬ್ಬನಿ ಇದ್ದ ಕಾರಣ ಕಾಡಾನೆ ಅವರಿಗೆ ಕಾಣಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಚಂದ್ರು ಅವರ ಭುಜ, ಕೈ ಹಾಗೂ ತಲೆಗೆ ಗಾಯವಾಗಿದ್ದು, ಸದ್ಯ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಮಲ್ಲು ತಿಳಿಸಿದರು.
ಇನ್ನೂ ಕಾಡಾನೆ ದಾಳಿಯಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ತಕ್ಷಣವೇ ಆನೆಯನ್ನು ಇಲ್ಲಿಂದ ಸ್ಥಳಾಂತರಿಸಬೇಕು. ಈ ಮೂಲಕ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy