ಮುಂಬೈ: ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ವ್ಯಕ್ತಿ ಹಾಗೂ ನಟ ಶಾರೂಖ್ ಖಾನ್ ಮನೆಗೆ ನುಗ್ಗಲು ಯತ್ನಿಸಿದ್ದ ವ್ಯಕ್ತಿ ಒಬ್ಬನೇ ಎನ್ನುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ
ಜನವರಿ 14 ರಂದು ರಿಟ್ರೀಟ್ ಹೌಸ್ ನ ಹಿಂಭಾಗದಲ್ಲಿ ಆರರಿಂದ ಎಂಟು ಅಡಿ ಉದ್ದದ ಕಬ್ಬಿಣದ ಏಣಿಯನ್ನು ಇರಿಸಿ ಶಾರುಖ್ ಖಾನ್ ಅವರ ಮನೆ ಮನ್ನತ್ ಒಳಗೆ ನೋಡಲು ಯತ್ನಿಸಿದ ವ್ಯಕ್ತಿ ಇದೇ ಆರೋಪಿ ಎನ್ನುವ ಶಂಕೆ ವ್ಯಕ್ತವಾಗಿದೆ.
ಶಾರುಖ್ ಖಾನ್ ಮನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿರುವ ವ್ಯಕ್ತಿಯ ಎತ್ತರ ಮತ್ತು ಮೈಕಟ್ಟು ಸೈಫ್ ಅಲಿ ಖಾನ್ ಕಟ್ಟಡದ ಮೆಟ್ಟಿಲುಗಳ ಮೇಲೆ ಕಾಣುವ ವ್ಯಕ್ತಿಯ ಎತ್ತರಕ್ಕೆ ಹೊಂದಿಕೆಯಾಗುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಶಾರುಖ್ ಖಾನ್ ಅವರ ಮನೆ ಮನ್ನತ್ ಒಳಗೆ ಪ್ರವೇಶಿಸಿದ ವ್ಯಕ್ತಿ ಭಾರವಾದ ಕಬ್ಬಿಣದ ಏಣಿಯನ್ನು ಇಟ್ಟು ಹತ್ತಲು ಯತ್ನಿಸಿದ್ದ. ಒಬ್ಬನೇ ಈ ಏಣಿಯನ್ನು ಹಿಡಿದು ಹತ್ತಲು ಸಾಧ್ಯವಿಲ್ಲ, ಹಾಗಾಗಿ ಈತನ ಜೊತೆಗೆ ಬೇರೆ ಇಬ್ಬರು ಮೂವರು ಇರುವ ಶಂಕೆ ವ್ಯಕ್ತವಾಗಿದೆ.
ಇತ್ತೀಚೆಗೆ ಮುಂಬೈನ ಬ್ಯಾಂಡ್‌ಸ್ಟ್ಯಾಂಡ್ ಪ್ರದೇಶದಲ್ಲಿರುವ ಶಾರುಖ್ ಅವರ ಐಷಾರಾಮಿ ಬಂಗಲೆ ಮನ್ನತ್ ಒಳಗೆ ವ್ಯಕ್ತಿಯೊಬ್ಬ ಇಣುಕಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಇದಾದ ನಂತರ, ಪೊಲೀಸರು ಶಾರುಖ್ ಖಾನ್ ಅವರ ಸುರಕ್ಷತೆ ದೃಷ್ಟಿಯಿಂದ ಅವರ ಮನೆಯನ್ನು ಸಹ ಪರಿಶೀಲಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx