ಬೀದರ್: ಸೋಮವಾರ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲ್ಲೂಕಿನ ಮಮದಾಪುರ ಗ್ರಾಮದ ಬಡಾವಣೆಯೊಂದರ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತು.
ಬೆಳಿಗ್ಗೆ ಬಿಸಿಲು ವಾತಾವರಣ ಇತ್ತು. ಸಂಜೆ ದಟ್ಟ ಮೋಡ ಕವಿದು ಆರಂಭವಾದ ಮಳೆ ಬಿಟ್ಟುಬಿಡದೆ ಸುರಿಯಿತು. ಮಳೆ ನೀರು ತಗ್ಗು ಪ್ರದೇಶದಲ್ಲಿ ಇರುವ ಮನೆಗಳಿಗೆ ಹೊಳೆಯಂತೆ ಹರಿಯಿತು.
ಮಳೆಯ ಮುನ್ಸೂಚನೆ ಇಲ್ಲದೆ ಬಡಾವಣೆಯ ಜನರಿಗೆ ಮಳೆ ನೀರು ಮನೆಗೆ ನುಗ್ಗಿದಾಗ ಆತಂಕಕ್ಕೆ ಒಳಗಾದರು. ತಗ್ಗು ಪ್ರದೇಶದಲ್ಲಿರುವ ಭೀಮರಾವ್ ಕೊಟಗೀರೆ, ಜೈವಂತ ಕೊಟಗೀರೆ, ಕೇರೋಬಾ ಸೇರಿದಂತೆ ಇತರರ ಮನೆಗಳಿಗೆ ನೀರು ನುಗ್ಗಿದೆ.
ವಿಷಯ ತಿಳಿದು ತಹಶೀಲ್ದಾರ್ ಮಹೇಶ ಪಾಟೀಲ್ ಭೇಟಿ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರು ಮನೆಗಳಲ್ಲಿ ಸಿಲುಕಿದ ಮಹಿಳೆಯರು, ಮಕ್ಕಳಿಗೆ ಹಾಗೂ ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಬೀದರ್ ಜಿಲ್ಲಾದ್ಯಂತ ಸೋಮವಾರ ಬಿರುಸಿನ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಬೀದರ್ ನಗರದ ಮುಖ್ಯ ರಸ್ತೆಗಳು ಜಲಾವೃತಗೊಂಡು ಸವಾರರು ಪರದಾಡಿದರು.
ಮಳೆಯ ಮುನ್ಸೂಚನೆ ಇಲ್ಲದೆ ಬಡಾವಣೆಯ ಜನರಿಗೆ ಮಳೆ ನೀರು ಮನೆಗೆ ನುಗ್ಗಿದಾಗ ಆತಂಕಕ್ಕೆ ಒಳಗಾದರು. ತಗ್ಗು ಪ್ರದೇಶದಲ್ಲಿರುವ ಭೀಮರಾವ್ ಕೊಟಗೀರೆ, ಜೈವಂತ ಕೊಟಗೀರೆ, ಕೇರೋಬಾ ಸೇರಿದಂತೆ ಇತರರ ಮನೆಗಳಿಗೆ ನೀರು ನುಗ್ಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC