ವಯನಾಡ್: ಕೇರಳದ ವಯನಾಡ್ ನಲ್ಲಿ ಭೀಕರ ಭೂಕುಸಿತ ಪ್ರಕರಣದಲ್ಲಿ 599 ಮಕ್ಕಳು ಮತ್ತು ಆರು ಗರ್ಭಿಣಿಯರು ಸೇರಿದಂತೆ 2,500 ಕ್ಕೂ ಹೆಚ್ಚು ಜನರು ಪರಿಹಾರ ಶಿಬಿರದಲ್ಲಿ ತಂಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಕುಸಿತದಿಂದ ಪೀಡಿತ ಜನರು ತಂಗಿರುವ ಬೆಟ್ಟದ ಜಿಲ್ಲೆಯ ಮೆಪ್ಪಾಡಿ ಮತ್ತು ಇತರ ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 16 ರಕ್ಷಣಾ ಶಿಬಿರಗಳಿವೆ. 723 ಕುಟುಂಬಗಳಿಗೆ ಸೇರಿದ 2,514 ಜನರು ಶಿಬಿರಗಳಲ್ಲಿದ್ದಾರೆ. ಅವರಲ್ಲಿ 943 ಪುರುಷರು, 972 ಮಹಿಳೆಯರು ಮತ್ತು 599 ಮಕ್ಕಳು ಎಂದು ಕೇರಳ ಸಿಎಂ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಅವರಲ್ಲಿ ಕೆಲವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾದ ನಂತರ ಕಾಣೆಯಾದವರ ಸಂಖ್ಯೆ ಹಿಂದಿನ 206 ರಿಂದ 180 ಕ್ಕೆ ಇಳಿದಿದೆ ಎಂದು ಅವರು ಭಾನುವಾರ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296