ಬೆಂಗಳೂರು : ಆರ್.ಆರ್.ನಗರ ಶಾಸಕ ಮುನಿರತ್ನ ವಿಚಾರವಾಗಿ ನೋಟಿಸ್ ಕೊಟ್ಟಿದ್ದೇವೆ. ಎಫ್ ಎಸ್ ಎಲ್ ವರದಿ ಬಳಿಕ ಶಾಸಕ ಸ್ಥಾನದ ರಾಜೀನಾಮೆ ಪಡೆಯುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನೋಟಿಸ್ ನೀಡಿದ್ದೇವೆ, ಎಫ್ ಎಸ್ ಎಲ್ ವರದಿ ಬಳಿಕ ಶಾಸಕ ಸ್ಥಾನದ ರಾಜೀನಾಮೆ ಪಡೆಯುತ್ತೇವೆ ಎಂದರು.
ಜಾತಿಗಣತಿ:
ಜಾತಿಗಣತಿ ಹೇಳಿ ಮಾಡಿಸಿದ್ದಾರೆಂದು ನಿಮ್ಮ ಪಕ್ಷದವರೇ ಹೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್, ಕೆ. ಸುಧಾಕರ್, ಶಾಮನೂರು ಶಿವಶಂಕರಪ್ಪ ವಿರೋಧ ಮಾಡುತ್ತಿದ್ದಾರೆ. ಲಿಂಗಾಯತ ಸಮುದಾಯದವರು ಕೂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ನಿಮ್ಮ ಗೊಂದಲಗಳನ್ನು ಬಿಜೆಪಿಯ ಮೇಲೆ ಹಾಕಬೇಡಿ ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಬೆಳಗಾವಿ ಸಚಿವರು ರೋಡ್ ಶೋ ಮಾಡುತ್ತಿದ್ದಾರೆ. ಉದ್ಯಮಿಗಳು ಮಾಡುವ ರೀತಿ ಸಚಿವರು ರೋಡ್ ಶೋ ಮಾಡುತ್ತಿದ್ದಾರೆ.ಕೊಡಗು, ಚಾಮರಾಜನಗರ, ಚಿಕ್ಕಮಂಗಳೂರು ಕಡೆಗೆ ರೋಡ್ ಶೋ ನಡೆಸಿದ್ದಾರೆ. ನಾನೇ ಸಿಎಂ ನಾನೇ ಸಿಎಂ ಅಂತ ಯಾರು ಹೇಳುತ್ತಿದ್ದಾರೆ? ಡಿ.ಕೆ. ಹೇಳಿಕೆಗಳಿಗೆ ಕಡಿವಾಣ ಹಾಕ್ತಿನಿ ನೋಟಿಸ್ ಕೊಡುತ್ತೇವೆ ಅಂದ್ರು. ಕಾಂಗ್ರೆಸ್ ನವರ ತಟ್ಟೆಯಲ್ಲಿ ಸತ್ತ ಹೆಣ ಬಿದ್ದಿದೆ. ಬಿಜೆಪಿ ತಟ್ಟೆನ್ನಹುಡುಕಲು ಬರುತ್ತಿದ್ದಾರೆ ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ವಿರುದ್ಧ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296