ಚಿತ್ರದುರ್ಗ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ, ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜನರು ವೀಕೆಂಡ್ ಕರ್ಫ್ಯೂಗೆ ಕ್ಯಾರೇ ಅನ್ನದೇ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಸರ್ಕಾರವು ಶುಕ್ರವಾರ ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ 5 ಘಂಟೆಯವರೆಗೂ ವೀಕೆಂಡ್ ಕರ್ಫೂ ಜಾರಿಗೊಳಿಸಿದೆ. ಆದರೆ ಹೆಸರಿಗೆ ಮಾತ್ರವೇ ಕರ್ಫ್ಯೂ ಇದ್ದು, ಸಾರ್ವಜನಿಕರು ಪೂಜೆಗಳಿಗೆ ಬೇಕಾಗುವ ಕಬ್ಬು , ಹೂ, ತರಕಾರಿ ಕೊಂಡುಕೊಳ್ಳುವಲ್ಲಿ ನಿರತರಾದರು.
ನಗರದಲ್ಲಿ ಕೊವಿಡ್ ನಿಯಮಗಳನ್ನು ಪಾಲಿಸದೇ ಜನ ಎಂದಿನಂತೆಯೇ ವ್ಯವಹರಿಸುತ್ತಿರುವುದು ಕಂಡು ಬಂತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy