ಸ್ಯಾಂಡಲ್ ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ಅವರು ಮದುವೆಯಾಗುತ್ತಿದ್ದಾರೆ. ನವೆಂಬರ್ ನಲ್ಲಿ ಮದುವೆ ನಡೆಯಲಿದೆ. ಬಹುಕಾಲದ ಉದ್ಯಮಿ ಗೆಳೆಯನ ಜೊತೆ ನಟಿ ರಮ್ಯಾ, ದಿವ್ಯ ಸ್ಪಂದನ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊಟೇಲ್ ಒಂದರಲ್ಲಿ ಎಂಗೇಜ್ ಮೆಂಟ್ ನಡೆದಿದೆ. ಅವರ ಹುಟ್ಟುಹಬ್ಬದ ದಿನ (ನವೆಂಬರ್ 29) ಮದುವೆ ನಡೆಯಲಿದೆ ಎಂದು ಸುದ್ದಿ ಹರಡಿತ್ತು.
ಸೆಪ್ಟೆಂಬರ್ 8 ರಂದು ನಟಿ ರಮ್ಯಾ ಅವರು ಆಪ್ತರೊಬ್ಬರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಸುದ್ದಿ ಹಬ್ಬಿತು. ಈ ಸುದ್ದಿ ಹಬ್ಬಿದಾಗ ಬಹಳಷ್ಟು ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಚರ್ಚೆ ಮಾಡ ತೊಡಗಿದ್ದರು. ಯಾರು ವರ? ಏನು ಮಾಡುತ್ತಿದ್ದಾರೆ? ಎಲ್ಲಿಯವರು? ಎಂದೆಲ್ಲ. ಯಾವಾಗ ಈ ಸುಳ್ಳು ಎಂದು ತಿಳಿಯಿತೋ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.
ಇದೀಗ ಈ ಸುದ್ದಿಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೋಹಕ ತಾರೆ ರಮ್ಯಾ ಅವರು ನನ್ನನ್ನು ಕೇಳದೆ ಯಾವುದೇ ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
“ಮಾಧ್ಯಮಗಳಿಂದ ನಾನು ಹಲವಾರು ಬಾರಿ ಮದುವೆಯಾಗಿದ್ದೇನೆ, ನಾನು ಲೆಕ್ಕ ಕಳೆದುಕೊಂಡಿದ್ದೇನೆ. ನಾನು ಮದುವೆಯಾದರೆ ಮತ್ತು ಯಾವಾಗ ಎಂದು ನೀವು ನನ್ನನ್ನು ಕೇಳಿ ತಿಳಿಯಿರಿ. ದಯವಿಟ್ಟು ಪರಿಶೀಲಿಸದ ಮೂಲಗಳ ಇಂತಹ ವದಂತಿಗಳನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.” ಹೀಗಾಗಿ ನಟಿ ಮದುವೆಯಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


