ಪ್ರಜ್ವಲ್, ಸೂರಜ್ ಪ್ರಕರಣ ಕೋರ್ಟ್ ನಲ್ಲಿ ಇದೆ. ಹಾಗಾಗಿ ರೇವಣ್ಣ ಅವರಿಗರೆ ಸುದ್ದಿಗಾರರು ಕೆಲ ಪ್ರಶ್ನೆಗಳನ್ನು ಕೇಳಿದಾಗ ರೇವಣ್ಣ ಕೊಟ್ಟ ಉತ್ತರ ಇಲ್ಲಿದೆ.
ಪ್ರಜ್ವಲ್, ಸೂರಜ್ ಪ್ರಕರಣ ಕೋರ್ಟ್ ನಲ್ಲಿ ಇದೆ. ಹೀಗಾಗಿ ಆ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ನನಗೆ ಕಾನೂನು, ನ್ಯಾಯಾಂಗದ ಮೇಲೆ ನಂಬಿಕೆ, ಗೌರವವಿದೆ. ಯಾವುದೇ ವಿಷಯ ಇದ್ರೂ ನ್ಯಾಯಾಂಗ, ದೇವರ ಮೇಲೆ ನಂಬಿಕೆಯಿದೆ ಎಂದರು.
ನಾನು ರಾಜಕೀಯ ನಿವೃತ್ತಿಯಾಗೋ ಪ್ರಶ್ನೆಯೇ ಇಲ್ಲ. ಅದೆಲ್ಲವನ್ನು ಕಾಲವೇ ಉತ್ತರಿಸಲಿದೆ. ಮಾಜಿ ಶಾಸಕ ಪ್ರೀತಂ ಗೌಡ ಷಡ್ಯಂತ್ರದ ಬಗ್ಗೆಯೂ ಮಾತನಾಡಲ್ಲ. ನಾನು ಈಗ ಪ್ರಜ್ವಲ್, ಸೂರಜ್ ಬಗ್ಗೆ ಯಾವುದೇ ಮಾತನಾಡೋದಿಲ್ಲ ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ನನಗೆ ಗೊತ್ತಿಲ್ಲ. ಅದೆಲ್ಲ ದೊಡ್ಡವರ ವಿಷಯವಾಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA