ತುಮಕೂರು: ರಾಜ್ಯದಲ್ಲಿ ಬರದ ಛಾಯೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿಯನ್ನ ಸಲ್ಲಿಸಿದ್ದೇವೆ. ಈಗ ಮತ್ತೊಂದು ವರದಿ ಲೇಟೆಸ್ಟ್ ರೆಡಿ ಮಾಡಿ, ಕೇಂದ್ರ ಸರ್ಕಾರಕ್ಕೆ ವರದಿಯನ್ನ ಸಲ್ಲಿಸಿದ್ದೇವೆ ಎಂದರು.
20 ರಿಂದ 25 ತಾಲೂಕುಗಳನ್ನ ಬಿಟ್ರೆ, ಉಳಿದೆಲ್ಲಾ ತಾಲೂಕುಗಳನ್ನ ಬರಪೀಡಿತ ಪ್ರದೇಶ ಅಂತ ಈಗಾಗಲೇ ಘೋಷಣೆ ಆಗಿದೆ. ಈಗ ಬೇಸಿಗೆ ಕಾಲ ಆರಂಭವಾಗ್ತಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆ ಸಮಸ್ಯೆ ಎದುರಾಗದಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನಮ್ಮ ಸರ್ಕಾರ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ಕೊಟ್ಟಿದೆ. ಅದಕ್ಕೆ ಬೇಕಾದ ಸಹಕಾರಬೇಕು, ಹಣಬೇಕು ಅದನ್ನ ಈಗಾಗಲೇ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್ ಗೆ ಹಣ ಇಡಲಾಗಿದೆ. ಅದು ಅವರವರ ಹಂತದಲ್ಲಿ ಪರಿಶೀಲನೆ ಮಾಡಿ ಹಣ ಬಿಡುಗಡೆ ಮಾಡಿಕೊಳ್ಳುವ ಅವಕಾಶ ಇದೆ ಎಂದರು.
ಇದಕ್ಕೆ ಉದಾಹರಣೆಗೆ ನಮ್ಮ ತುಮಕೂರು ಜಿಲ್ಲೆಗೆ 19 ಕೋಟಿ ಇಡಲಾಗಿದೆ. ರಾಜ್ಯದಲ್ಲಿ ಸುಮಾರು 400, 500 ಕೋಟಿ ಹಣವನ್ನ ಅದಕೋಸ್ಕರ ಕೊಟ್ಟಿದ್ದೇವೆ. ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿನಲ್ಲಿ ಪರಿಶೀಲನೆ ಮಾಡಿ ಅದಕ್ಕೆ ಹಣ ಖರ್ಚು ಮಾಡಿಕೊಳ್ತಾರೆ. ಕುಡಿಯುವ ನೀರಿಗೆ, ಮೇವಿಗೆ, ಕಾಮಗಾರಿ, ಗೋಶಾಲೆಗೆ ಆ ಹಣವನ್ನ ಖರ್ಚು ಮಾಡಲಿಕ್ಕೆ ಇಡಲಾಗಿದೆ. ಹಣವನ್ನ ಖರ್ಚು ಮಾಡಿಕೊಳ್ಳಲು ಸರ್ಕಾರದಿಂದ ಸೂಚನೆ ಕೊಡಲಾಗಿದೆ ಎಂದರು.
ಕೊರಟಗೆರೆ ತಾಲ್ಲೂಕಿನ ಜಯಮಂಗಲಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ತಹಶಿಲ್ದಾರ್ ಗೆ ವಾರ್ನಿಂಗ್ ಕೊಟ್ಟಿದ್ದೇವೆ. ಜನ ಕದ್ದುಪದ್ದು ಮಾಡ್ತಾರೆ ಅದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಾವು ಆದಷ್ಟು ಮರಳು ಗಣಿಗಾರಿಕೆ ಆಗಬಾರದು ಅಂತ ಪ್ರಯತ್ನ ಮಾಡ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ನಮ್ಮ ಜಯಮಂಗಲಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗಿಯೋಕೆ ಬಿಡೋದಿಲ್ಲ. ಮೊದಲಿನಿಂದಲೂ ಪ್ರೋಟೇಕ್ಟ್ ಮಾಡಿಕೊಂಡು ಬಂದಿದ್ದೇವೆ ಅದನ್ನ ಮಾಡ್ತಿವಿ ಎಂದರು.
ಸಿಎಂ ಇಬ್ರಾಹಿಂ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದೆಲ್ಲಾ ನನಗೆ ಗೊತ್ತಿಲ್ಲಪ್ಪ ಎಂದು ಹೇಳಿ ಪರಮೇಶ್ವರ್ ಜಾರಿಕೊಂಡರು.
ಬಾಲಕಿಯ ಅತ್ಯಾಚಾರಕ್ಕೆ ಯತ್ನ ಪ್ರಕರಣ:
ತುಮಕೂರಿನಲ್ಲಿ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಅತ್ಯಾಚಾರಕ್ಕೆ ಅಟ್ಮೇಂಟ್ ಮಾಡಿದ್ದಾನೆ. ಅವನ ಮೇಲೆ ಪೋಕ್ಸೋ ಕೇಸ್ ಹಾಕಿ. ಪೊಲೀಸರು ಅವನನ್ನ ಈಗಾಗಲೇ ಅರೆಸ್ಟ್ ಮಾಡಿದ್ದಾರೆ. ತುಮಕೂರಿನಲ್ಲಿ ಆಟೋಗಳು ಹೆಚ್ಚಾಗಿರುವ ಹಿನ್ನೆಲೆ. ಆರ್ಟಿಓ ಆಫೀಸ್ ನಲ್ಲಿ ಆಟೋಗಳ ದಾಖಲೆ ಸಿಗುತ್ತೆ. ಅದನ್ನ ಪೊಲೀಸರು ತಗೊಂಡು ಬೇಕಾದ ಮಾಹಿತಿ ತೆಗೆದುಕೊಳ್ತಾರೆ. ಕೆಲವೊಂದು ಆಟೋಗಳು ತಾಲೂಕುಗಳಲ್ಲಿ ರಿಜಿಸ್ಟೇಶನ್ ಮಾಡಿಸಿರ್ತಾರೆ. ತುಮಕೂರಿಗೆ ಪ್ಯಾಸೆಂಜರ್ ಬಾಡಿಗೆ ಬಂದಾಗ ಆ ದಿನ ತುಮಕೂರಿನಲ್ಲಿಯೇ ಬಾಡಿಗೆ ಹೊಡೆತಾರೆ. ರೆಗ್ಯೂಲರ್ ಆಗಿ ಹೊಡಿತಾರೆ ಅನ್ನೊದನ್ನ ಪರಿಶೀಲನೆ ಮಾಡ್ತಿವಿ. ಈಗಾಗಲೇ ಡಿಸಿ ಅವರು ಗಮನಹರಿದಿದ್ದಾರೆ. ಅದನ್ನ ಇನ್ನು ಹೆಚ್ಚಿನ ಪರಿಣಾಮಕಾರಿಯಾಗಿ ಮಾಡಬೇಕು ಎಂದು ತಿಳಿಸಿದರು.


